ನಾಯಿಯ ಬರ್ತ್‌ಡೇಗೆ ಊರಿನವರಿಗೆ ಬಿರಿಯಾನಿ ಊಟ ಹಾಕಿಸಿದ ದಂಪತಿ

ನಮ್ಮಲ್ಲಿ ಸಾಕಷ್ಟು ಜನ ಪ್ರಾಣಿ ಪ್ರಿಯರಿದ್ದಾರೆ. ಅದ್ರಲ್ಲೂ ನಾಯಿಯನ್ನು ಹೆಚ್ಚಾಗಿ ಪ್ರೀತಿಸೋ ಜನರು ಸಾಮಾನ್ಯವಾಗಿ ನಾವು ಕಾಣ್ತೀವಿ, ಇನ್ನು ಕೆಲವ್ರು ನಾಯಿ ಕಂಡೆ ಸಾಕು ಅದನ್ನು ಕಲ್ಲು ಹೊಡೆದು ಓಡಿಸುವ ಪ್ರಯತ್ನವನ್ನು ಮಾಡ್ತಾರೆ. ಇನ್ನು ಕೆಲವ್ರು ನಾಯಿಯನ್ನು ತಮ್ಮ ಮನೆಯ ಸದಸ್ಯನಂತೆ ಸಾಕಿ ಸಲಹುತ್ತಾರೆ.

ಅಲ್ಲದೇ ತಾವು ಎಲ್ಲಿಗೆ ಹೊರಟರು ಜೊತೆಯಲ್ಲಿ ನಾಯಿಯನ್ನು ಸಹ ಕರೆದುಕೊಂಡು ಹೋಗುತ್ತಾರೆ. ಇನ್ನು ಅದಕ್ಕೆ ಹುಟ್ಟಿದ ಹಬ್ಬ ಅಂತ ಅನೇಕ ಕಾರ್ಯಕ್ರಮಗಳನ್ನು ಮಾಡ್ತಾರೆ. ಅದೇ ರೀತಿ ಇಲ್ಲೊಬ್ಬರು ನಾಯಿಯ ಬರ್ತ್‌ಡೇ ಮಾಡಿದ್ದಾರೆ. ಆದ್ರೆ ಬರೀ ಇವರು ಕೇಕ್‌ ಕಟ್‌ ಮಾಡಿ ಸಂಭ್ರಮಿಸಿಲ್ಲ ಬದಲಿಗೆ ಊರಿನವರಿಗೆ ಬಿರಿಯಾನಿ ಊಟವನ್ನು ಹಾಕುವ ಮೂಲಕ ತಮ್ಮ ನೆಚ್ಚಿನ ನಾಯಿಗ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದ್ದಾರೆ.

ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರೋ ವೆಂಕಟೇಶ್‌ ಹಾಗೂ ಅಮರಮ್ಮ ದಂಪತಿ ರಾಮು ಎಂಬ ನಾಯಿಯನ್ನು ಸಾಕುತ್ತಿದ್ದು, ಈ ನಾಯಿಗೆ ಇದೀಗ ಐದು ವರ್ಷದ ಸಂಭ್ರಮ ತಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿರೋ ಈ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದ್ದು, ವೆಂಕಟೇಶ್‌ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಈ ರಾಮು ಎಂಬ ನಾಯಿಯನ್ನು ತಮ್ಮ ಮಗುವಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಈ ನಾಯಿಯನ್ನು ಯಾರು ನಾಯಿ ಎಂದು ಕರೆಯುವ ಹಾಗಿಲ್ಲ, ಐದು ವರ್ಷದ ಹಿಂದೆ ಈ ನಾಯಿ ಕಣ್ಣು ಬಿಡುವ ಮುನ್ನವೇ ಮನೆಗೆ ಕರೆದುಕೊಂಡು ಬಂದಿದ್ದ ಈ ದಂಪತಿ ಅಂದಿನಿಂದ ಇದನ್ನು ತುಂಬಾ ಪ್ರೀತಿಯಿಂದ ಸಾಕುತ್ತಿದ್ದಾರೆ.

ರಾಮುವಿಗೆ ಇದೀಗ ಐದು ವರ್ಷ ತುಂಬಿದ್ದು, ಕೇಕ್‌ ಕತ್ತರಿಸಿ ಸಿಹಿ ಹಂಚಿದ ದಂಪತಿ ಊರಿನವರಿಗೆ ಚಿಕನ್‌ ಬಿರಿಯಾನಿ ಮತ್ತು ಫಿಶ್‌ ಕಬಾಬ್‌ ಮಾಡಿ ಊಟ ಬಡಿಸಿದ್ದಾರೆ. ಸದ್ಯ ಪ್ರಾಣಿ ಪ್ರಿಯರು ಇವರ ಈ ಹುಟ್ಟುಹಬ್ಬದ ಸಂಭ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top