ನಾನು ಸಿಗರೇಟ್‌ ಸೇದಲು ಸ್ಫೂರ್ತಿಯೇ ಡಾಲಿ ಧನಂಜಯ್‌ ಎಂದ ರಚಿತಾ ರಾಮ್‌

ಸ್ಯಾಂಡಲ್‌ವುಡ್‌ನ ಡಿಂಪಕ್‌ ಕ್ವೀನ್‌ ರಚಿತಾ ರಾಮ್‌ ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಲಾಕ್‌ ಡೌನ್‌ ಮುಗಿಯುತ್ತಿದ್ದಂತೆ ಹೈದರಬಾದಿಗೆ ಹಾರಿ ತೆಲುಗು ಸಿನಿಮಾದ ಶೂಟಿಂಗ್‌ ಮುಗಿಸಿಕೊಂಡು ಬಂದಿರೋ ರಚ್ಚು, ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ಆಕ್ಟ್‌ ಮಾಡ್ತಾ ಇದ್ದಾರೆ. ಇತ್ತಿಚೆಗೆ ಮಾಧ್ಯಮದ ಜೊತೆ ಮಾತನಾಡುವ ವೇಳೆ ರಚಿತಾ ರಾಮ್‌ ಇಂಟರೆಸ್ಟಿಂಗ್‌ ವಿಚಾರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಹೌದು ರಚಿತಾ ರಾಮ್‌ ಸಿಗರೇಟ್‌ ಸೇದೋದಕ್ಕೆ ಸ್ಫೋರ್ತಿ ಯಾರು ಅನ್ನೋದ್ರ ಬಗ್ಗೆ ಹೇಳಿಕೊಂಡಿದ್ದಾರೆ. ರಚಿತಾ ರಾಮ್‌ ಶೋ ಮ್ಯಾನ್‌ ಪ್ರೇಮ್‌ ನಿರ್ದೇಶನದ ಏಕ್‌ ಲವ್‌ಯಾ ಸಿನಿಮಾದಲ್ಲಿ ನಟಿಸಿದ್ದು, ಅದರಲ್ಲಿ ರಚ್ಚು ಸಿಗರೇಟ್‌ ಸೇದಿರೋ ಫೋಟೋ ಒಂದು ರಿವೀಲ್‌ ಮಾಡಿತ್ತು, ಚಿತ್ರತಂಡ ಇನ್ನು ರಚಿತಾ ರಾಮ್‌ ಅವರ ಆ ಸಿಗರೇಟ್‌ ಸೇದೋ ಫೋಟೋ ಕೂಡ ಸಖತ್‌ ವೈರಲ್‌ ಕೂಡ ಆಗಿತ್ತು,

ಇದೀಗ ಮತ್ತೆ ರಚಿತಾ ರಾಮ್‌ ಕೈನಲ್ಲಿ ಸಿಗರೇಟು ಮತ್ತು ಗನ್‌ ಹಿಡಿದಿರೋ ಫೋಟೋ ಒಂದು ಶೇರ್‌ ಮಾಡಿದ್ದು ಸದ್ಯ ವೈರಲ್‌ ಆಗಿದು , ಇನ್ನು ಫೋಟೋ ಶೇರ್‌ ಮಾಡೋ ಜೊತೆಯಲ್ಲಿ ”ನನ್ನಲ್ಲಿ ನೀವು ಅಪರಾಧ ಹುಡುಕಿದರೆ, ನಾನು ನಿಮಗೆ ನನ್ನನ್ನು ಹುಡುಕಬೇಡಿ ಎಂದು ಸಲಹೆ ನೀಡುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ. ಬಹುಶಃ ಟೀಕೆ ಮಾಡೋರಿಗೆ ಇದು ರಚ್ಚು ಉತ್ತರ ಎನಿಸುತ್ತಿದೆ. ಸದ್ಯ ಈ ಫೋಟೋ ವೈರಲ್‌ ಆಗಿದ್ದು ಇದೀಗ ರಚಿತಾರಾಮ್‌ ತಮಗೆ ಸಿಗರೇಟ್‌ ಸೇದಲು ಸ್ಫೂರ್ತಿ ಯಾರು ಅನ್ನೋದ್ರ ಬಗ್ಗೆ ಮಾತನಾಡಿದ್ದು, ಈ ರೀತಿ ಸಿಗರೇಟ್‌ ಸೇದೋಕೆ ಸ್ಪೋರ್ತಿ ಡಾಲಿ ಧನಂಜಯ್‌ ಅಂತ ಹೇಳಿದ್ದಾರೆ. ಟಗರು ಸಿನಿಮಾದಲ್ಲಿ ಧನಂಜಯ್‌ ಅವರ ಪಾತ್ರ ಹಾಗೂ ಮ್ಯಾನರಿಸಂ ಇಷ್ಟ ಪಟ್ಟಿದ್ದರಂತೆ ಡಿಂಪಲ್‌ ಕ್ವೀನ್‌, ಅದೇ ಮ್ಯಾನರಿಸಂನ ಸ್ಫೂರ್ತಿಯಾಗಿ ತೆಗೆದುಕೊಂಡು ಸಿಗರೇಟ್‌ ಕೈಗೆತ್ತಿಕೊಂಡಿದ್ದಂರಂತೆ.

ಇನ್ನು ಸಿಗರೇಟ್‌ ಸೇದೋ ವಿಚಾರವಾಗಿ ಮಾತನಾಡಿರೋ ರಚಿತಾರಾಮ್‌ ʻ ನಾನು ಸಿಗರೇಟ್‌ ಸೇದೋಲ್ಲ, ಆದ್ರೆ ಪ್ರೇಮ್‌ ಅವರ ʻಏಕ್‌ ಲವ್‌ ಯಾʼ ಸಿನಿಮಾದಲ್ಲಿ ಆ ಸಂದರ್ಭದಲ್ಲಿ ಪಾತ್ರ ಡಿಮ್ಯಾಂಡ್‌ ಮಾಡ್ತು. ಅಲ್ಲಿ ನಾಟಕೀಯವಾಗಿ ಇರೋದು, ಪಾತ್ರಕ್ಕೆ ಫೀಲ್‌ಗೆ ಅಂತ ಸೇದಿದ್ದೇ. ಆ ರೀತಿ ಮಾಡಲು ನನಗೆ ಸ್ಪೂರ್ತಿ ಟಗರು ಡಾಲಿ. ಈ ಬಗ್ಗೆ ನಾನು ಧನಂಜಯ್‌ ಜೊತೆಯು ಹೇಳಿದ್ದೆ ಅಂತ ಹೇಳಿಕೊಂಡಿದ್ದಾರೆ.

ಸದ್ಯ ರಚಿತಾ ರಾಮ್‌ ಡಾಲಿ ಧನಂಜಯ್‌ ಜೊತೆಯಲ್ಲಿ ನಟಿಸ್ತಾ ಇದ್ದು, ವಿಖ್ಯಾತ್‌ ಚಿತ್ರ ಪ್ರೊಡಕ್ಷನ್‌ನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top