ನಾನು ಮತ್ತು ಗುಂಡನಿಗೆ ಸೆನ್ಸಾರ್ ಫುಲ್‌ ಮಾರ್ಕ್ಸ್‌..ಥಿಯೇಟರ್‌ಗೆ ಬಂದು ನೋಡೋಕೆ ರೆಡಿಯಾಗಿ ಬಾಸ್‌..!

ಒಂದು ನಾಯಿ ಒಬ್ಬ ಆಟೋ ಚಾಲಕ ಇಬ್ಬರ ನಡುವೆ ನಡಿಯೋ ಸಂಬಂಧದ ಬೆಸುಗೆ..ಅವನನ್ನು ಬಿಟ್ಟು, ನಾಯಿಗೆ ಇರಲು ಆಗಲ್ಲೋ..ನಾಯಿಯನ್ನು ಸಾಕೋ ಮನಸ್ಸಿದ್ದರು ಪರಿಸ್ಥಿತಿ ಅದಕ್ಕೆ ಅನುಮಾಡಿ ಕೊಡಲ್ಲ..ಅರೇ ಇದನೆಲ್ಲೋ ನೋಡಿದ್ದೀವಲ್ಲ..ಅಂತ ಅನ್ಕೊಂಡ್ರ ಹೌದು ಇತ್ತಿಚೆಗೆ ನಾನು ಮತ್ತು ಗುಂಡ ಅಂತ ಒಂದು ಸಣ್ಣ ಟೀಸರ್‌ ಸಖತ್‌ ಸೌಂಡ್‌ ಮಾಡಿತ್ತು,ಅದರಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ ಮತ್ತು ಒಂದು ನಾಯಿಯ ಮನೋಜ್ಞ ದೃಶ್ಯವನ್ನ ಟ್ರೈಲರ್‌ನಲ್ಲಿ ತೋರಿಸಿ ಎಲ್ಲರಿಗೂ ಸಿನಿಮಾ ನೋಡ್ಲೇ ಬೇಕು ಅನ್ನೋ ಹಾಗೇ ಮಾಡಿತ್ತು..ಆದ್ರೀಗ ಆ ಚಿತ್ರತಂಡದಿಂದ ಒಂದು ಗುಡ್‌ ನ್ಯೂಸ್‌ ಬಂದಿದೆ..

ಹೌದು ನಾನು ಮತ್ತು ಗುಂಡ… ಸ್ಯಾಂಡಲ್ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾ. ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದ್ದು, ಚಿತ್ರ ಮೇಲೆ ಭರವಸೆ ಹೆಚ್ಚಿಸಿದೆ.
ನಾನು ಮತ್ತು ಗುಂಡ ಚಿತ್ರ ಸದ್ಯ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ, ನಾನು ಮತ್ತು ಗುಂಡ ಚಿತ್ರವನ್ನ ನೋಡಿ, ಮೆಚ್ಚಿಕೊಂಡಿರೋ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ಕೊಟ್ಟು ಇದು ಎಲ್ಲಾ ವರ್ಗದವರು ನೋಡುವಂತಹ ಸಿನಿಮಾ. ಭಾವನಾತ್ಮಕ ಸಂಬಂಧವಿರೋ ಅದ್ಭುತ ಚಿತ್ರವೆಂದು ಬಣ್ಣಿಸಿದೆ.

ಅಂದ್ಹಾಗೆ ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ನ ಜಾಕ್ ಮಂಜು ನಾನು ಮತ್ತು ಗುಂಡ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಠ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ಜಾಕ್ ಮಂಜು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾವನ್ನ ತೆಗೆದುಕೊಂಡಿದ್ದು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಹಂಚಿಕೊಳ್ಳೋ ಧಾವಂತದಲ್ಲಿದ್ದು, ಟ್ರೈಲರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ. ಒಟ್ಟಿನಲ್ಲಿ ಒಂದು ಮನುಷ್ಯ ಮತ್ತು ಪ್ರಾಣಿಯ ಸಂಬಂಧ ಬಗೆಗಿನ ಚಿತ್ರವನ್ನು ನೋಡಿ ಬಹುಕಾಲವಾಗಿದ್ದ ಕನ್ನಡ ಸಿನಿರಸಿಕರಿಗೆ ಈಗ ಮತ್ತೊಂದು ಭಾವನಾತ್ಮಕ ಚಿತ್ರವನ್ನು ಕೊಡಲು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ರೆಡಿಯಾಗಿದ್ದಾರೆ,ಇನ್ನು ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಾಣ ಮಾಡಿದ್ರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.ಇನ್ನು ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ನೀಡಿದ್ದು. ಈಗಾಗಲೇ ನಾನು ಮತ್ತು ಗುಂಡ ಚಿತ್ರದ ಟೈಟಲ್‌ ಟ್ರಾಕ್‌ ಲಿರಿಕಲ್‌ ವಿಡಿಯೋ ಪ್ರೇಕ್ಷಕರನ್ನು ಮೋಡಿ ಮಾಡ್ತಾ ಇದೆ. ಅಂದ ಹಾಗೆ ನಾನು ಮತ್ತು ಗುಂಡ ಸೆನ್ಸಾರ್ ಸರ್ಟಿಫಿಕೇಟ್ ಯ/ಎ ಪಡೆದಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top