ನಾನು ಪರಮ ಶಿವ ನನ್ನನ್ನು ಟಚ್ ಮಾಡಲು ಆಗೋಲ್ಲ – ನಿತ್ಯಾನಂದ..!

ಸದ್ಯ ಸುದ್ದಿಯ ಹಾಟ್ ಫೇವರೀಟ್ ಆಂದ್ರೆ ಅಂದು ತನ್ನನ್ನು ತಾನೇ ದೇವಮಾನವ ಅಂತ ಕರೆಸಿಕೊಂಡಿರೋ ಬಿಡದಿಯ ನಿತ್ಯಾನಂದ. ಇತ್ತೀಚೆಗೆ ಕೈಲಾಸ ಅನ್ನೋ ದೇಶ ಕಟ್ಟಿದ್ದಾನೆ ಅನ್ನೋ ಮಾಹಿತಿ ಹೊರ ಬಿದ್ದು ಸಂಚಲನ ಸೃಷ್ಟಿ ಮಾಡಿದ್ದ ಈ ಸ್ವಯಂ ಘೋಷಿತ ದೇವಮಾನವ, ಈ ಹಿಂದೆ ನಾನು ಹೇಳಿದ್ದಕ್ಕೆ ಸೂರ್ಯ 10 ನಿಮಿಷ ಲೇಟಾಗಿ ಉದಯಿಸಿದ ಅನ್ನೋ ವಿಡಿಯೋ ವೈರಲ್ ಆಗಿತ್ತು, ಆದ್ರೆ ಈಗ ನಿತ್ಯಾನಂದನ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ನಾನು ಪರಮಶಿವ ನನ್ನನ್ನು ಯಾರು ಮುಟ್ಟಲು ಸಾಧ್ಯವಿಲ್ಲ, ಎಂದು ನವೆಂಬರ್ 22ರಂದು ಪೋಸ್ಟ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ನಿಜವನ್ನು ಬಾಯ್ಬಿಡಿಸಲು ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ವಿಚಾರಣೆ ಮಾಡ ಬೇಕಾಗಿಲ್ಲ, ಅಂತ ಈ ವಿಡಿಯೋದಲ್ಲಿ ಹೇಳಿದ್ದಾನೆ.
ಸದ್ಯ ಈಕ್ವೇಡರ್ ನಲ್ಲಿ ಹಿಮಪ್ರದೇಶ ಖರೀದಿಸಿ ದೇಶ ಮಾಡಲು ಹೊರಟಿದ್ರೆ, ಸದ್ಯ ವೀಸಾ ಅವಧಿ ಮುಗಿದಿದ್ದು,ನವೀಕರಣ ಅರ್ಜಿಯನ್ನು ಅಲ್ಲಿನ ಸರ್ಕಾರ ತಿರಸ್ಕರಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top