ನಾನು ಡ್ರಗ್ಸ್‌ ಸೇವನೆ ಮಾಡಲ್ಲ,ಅದರ ಬಗ್ಗೆ ನನಗೆ ಗೊತ್ತಿಲ್ಲ – ರಚಿತಾ ರಾಮ್‌..

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಡ್ರಗ್ಸ್‌ ಮಾಫಿಯಾ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದು, ಇದರ ಬಗ್ಗೆ ಸ್ಯಾಂಡಲ್‌ವುಡ್‌ನ ಕೆಲ ಮಂದಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕೂಡ ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಮಾಫಿಯಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಡ್ರಗ್ಸ್‌ ಸೇವನೆ ಮಾಡಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಸುದ್ದಿಯ ಬಗ್ಗೆ ನನಗೆ ಗೊತ್ತಿಲ್ಲ, ಹಾಗೇನಾದ್ರು ಅದು ಇಂಡಸ್ಟ್ರಿಯಲ್ಲಿ ಇದ್ದರು ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರು ಅವರ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂದು ಅಂದುಕೊಂಡಿರುತ್ತಾರೋ ಹಾಗೆ ಇರುತ್ತಾರೆ. ಅವರ ಜೀವನ ಅವರ ಇಷ್ಟ, ನಾವು ಚೆನ್ನಾಗಿ ಇದ್ದರೆ ಮಾತ್ರ ನಮ್ಮ ಜೊತೆ ಇರ್ತಾರೆ ಇಲ್ಲ ಅಂದ್ರೆ ಬಿಟ್ಟು ಹೋಗ್ತಾರೆ, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳ ಬೇಕು ಎಂದು ರಚಿತಾ ರಾಮ್‌ ಹೇಳಿದ್ದಾರೆ.

ನಾನು ಡ್ರಗ್ಸ್‌ ಸೇವನೆ ಮಾಡೋದಿಲ್ಲ, ಮಾಡುವವರ ಬಗ್ಗೆಯೂ ನನಗೆ ಗೊತ್ತಿಲ್ಲ, ನಮ್ಮ ಆರೋಗ್ಯ, ಕುಟುಂಬ ಮತ್ತು ಜೀವನವನ್ನು ನಾವೇ ನೋಡಿಕೊಳ್ಳಬೇಕು , ಮಾದಕ ವಸ್ತುಗಳನ್ನು ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳ ಬೇಡಿ ಎಂದು ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top