ನಾನು ಕರ್ನಾಟಕ ಬಿಟ್ಟು ಹೋಗ್ತೀನಿ ಅಂದ ನಟ ಯಶ್..!

ಮಂಡ್ಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಬೃಹತ್ ರ್ಯಾಲಿ ಮೂಲಕ ಸ್ವಾಭಿಮಾನದ ಸಮಾವೇಶ ಮಾಡಿದ ಸುಮಲತಾ ಅಂಬರೀಶ್ ವೇದಿಕೆಯಲ್ಲಿ ಇಂದು ಯಶ್ ಕರ್ನಾಟಕವನ್ನು ಬಿಟ್ಟು ಹೋಗುವ ಮಾತನ್ನು ಹೇಳಿದ್ದಾರೆ. ಹೌದು ಎಚ್ ಡಿ ಕುಮಾರಸ್ವಾಮಿ ಯಶ್ ನಮ್ಮದು ಕಳ್ಳರ ಪಕ್ಷ ಅಂತ ಹೇಳಿದ್ದಾರೆ ಅಂತ ಯಶ್ ಬಗ್ಗೆ ಅರೋಪ ಹೊರೆಸಿದ್ದ ಕುಮಾರಸ್ವಾಮಿಯವರಿಗೆ ಇಂದು ನಟ ಯಶ್ ವೇದಿಕೆಯಲ್ಲಿ ಕುಮಾರಸ್ವಾಮಿಯವರಿಗೆ ನೇರವಾಗಿ ಸವಾಲು ಹಾಕಿದ್ದಾರೆ.. ವೇದಿಕೆಯಲ್ಲಿ ಮಾತನಾಡಿದ ಯಶ್ ನಾನು ಮಂಜುನಾಥ ಸ್ವಾಮಿಯನ್ನು ನಂಬುವ ವ್ಯಕ್ತಿ ನಾನು ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳ್ತೀನಿ ನಾನು ಕಳ್ಳರ ಪಕ್ಷ ಅಂತ ಹೇಳಿದ್ರೆ ನಾನು ಕರ್ನಾಟಕವನ್ನೇ ಬಿಟ್ಟು ಹೋಗ್ತೀನಿ ಅಂತ ಕುಮಾರಸ್ವಾಮಿಗೆ ಯಶ್ ನೇರವಾಗಿ ಸವಾಲು ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top