ನಾದ ಬ್ರಹ್ಮ ಹಂಸಲೇಖಗೆ ನಮೋನಮಃ ಅಂದ ಡಾಲಿ ಧನಂಜಯ್..

ಸ್ಯಾಂಡಲ್ ವುಡ್ ನಲ್ಲಿ ಡಾಲಿ‌ ಅಂತನೇ ನೇಮ್ ಫೇಮ್ ಪಡೆದುಕೊಂಡಿರೋ‌ ಧನಂಜಯ್ ಗೆ ಆ ಒಂದು ವೇದಿಯಲ್ಲಿ ಹಂಸಲೇಖ ಅವರಿಂದ ಸಿಕ್ಕ ಆ ಒಂದು ಪ್ರಸಂಶೆ ಈಗ ಡಾಲಿ ಧನಂಜಯ್ ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.. ಹೌದು ಇತ್ತೀಚೆಗೆ ನಡೆದ ‘ಬಿಚ್ಚುಗತ್ತಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ವೇಳೆ..ವೇದಿಕೆಯಲ್ಲಿ ಹಂಸಲೇಖ ಮತ್ತು ಅನೇಕ ಗಣ್ಯರು ನೆರೆದಿದ್ದ ವೇಳೆ.. ಆ್ಯಂಕರ್ ಡಾಲಿಯವರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಂತ ಹೇಳಿದಾಗ..ವೇದಿಕೆ ಮೇಲೆ ಇದ್ದ ಹಂಸಲೇಖ ಹಂಗ್ ಹೇಳಿದ್ರೆ ಹೆಂಗಮ್ಮ,ಕನ್ನಡಕ್ಕೆ ಇನ್ನೊಂದು ತಾರೆ ಹುಟ್ಟಿದೆ.ಅದಕ್ಕೊಂದು ದೊಡ್ಡ ಚಪ್ಪಾಳೆ ಬರ್ಲಿ ಅಂತ ಹೇಳಿ ವೇದಿಕೆಗೆ ಹಂಸಲೇಖ ಬರಮಾಡಿಕೊಂಡ್ರು,ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,ಈ ವಿಡಿಯೋವನ್ನು‌ ಧನಂಜಯ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು,’ನಾದ ಬ್ರಹ್ಮ ನಮೋ ನಮಃ’ ಧನ್ಯೋಸ್ಮಿ,ನಿಮ್ಮಿಂದ ಬಂದ ಈ ಮಾತು ಇನ್ನೂ ಸಾವಿರಾರು ಹೆಜ್ಜೆಗಳು ಇಡುವ ಹಾಗೇ ನನಗೆ ಶಕ್ತಿ ತುಂಬಿದೆ ಎಂದು ಬರೆದುಕೊಂಡಿದ್ದಾರೆ..

ಒಟ್ಟಿನಲ್ಲಿ ಹಂಸಲೇಖ ಅವರ ಅಭಿಮಾನಿಯಾಗಿರೋ ಧನಂಜಯ್ ಅವರಿಗೆ ಹಂಸಲೇಖ ಅವರ ಮಾತು ಮತ್ತಷ್ಟು ಶಕ್ತಿ ತುಂಬಿದ್ದು,ಅದೇ ಅಭಿಮಾನವನ್ನು ಫೇಸ್ ಬುಕ್‌ ಮೂಲಕ ತೋರಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top