ನವರಾತ್ರಿಯಲ್ಲಿ ಒಂಭತ್ತು ದಾಖಲೆ ಬರೆದ ಆರ್‌ಸಿಬಿ

ಆರ್‌ಸಿಬಿ ನಿನ್ನೆಯ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಇದೀಗ ಒಂದೇ ಪಂದ್ಯದಲ್ಲಿ ಆರ್‌ಸಿಬಿ ಹಲವು ದಾಖಲೆಗಳಿಗೆ ಸಾಕ್ಷಿ ಆಗೋ ಮೂಲಕ ಯಾರು ಮುರಿಯಲು ಸಾಧ್ಯವಾಗದ ದಾಖಲೆಗಳನ್ನು ಆರ್‌ಸಿಬಿ ಸೃಷ್ಟಿಸಿದೆ. ಹೌದು ನವರಾತ್ರಿಯ ಸಂಧರ್ಭದಲ್ಲಿ ಒಂದೇ ಪಂದ್ಯದಲ್ಲಿ 9 ದಾಖಲೆಗಳನ್ನು ಆರ್‌ಸಿಬಿ ಮಾಡಿದ್ದು,

  1. ಮೊದಲೇ ರೆಕಾರ್ಡ್‌ ನೋಡೋದಾದ್ರೆ. ಈ ಐಪಿಎಲ್‌ ಸೀಸನ್‌ನಲ್ಲಿ ಆರ್‌ ಆರ್‌, ಚೆನ್ನೈ ತಂಡವನ್ನು 126ರನ್‌ಗಳ ಕಡಿಮೆ ಸ್ಕೋರ್‌ಗೆ ಕಟ್ಟಿ ಹಾಕಿರೋ ದಾಖಲೆಯನ್ನು ಆರ್‌ಸಿಬಿ ಕೆಕೆಆರ್‌ ತಂಡವನ್ನು 84ರನ್‌ಗಳಿಗೆ ಕಟ್ಟಿಹಾಕುವ ಮೂಲಕ ದಾಖಲೆ ಬರೆಯಿತು
  2. ಎರಡನೇ ದಾಖಲೆ ಒಂದು ಪಂದ್ಯದಲ್ಲಿ 20 ಓವರ್‌ಗಳನ್ನು ಮಾಡಿ ಕೇವಲ 84 ರನ್‌ ನೀಡಿದ ಮೊದಲ ಟಿ 20 ಟೀಂ ಅನ್ನೋ ಹೆಗ್ಗಳಿಕೆಗೆ ಆರ್‌ಸಿಬಿ ಕಾರಣವಾಗಿದೆ
  3. ಮೊಹಮ್ಮದ್‌ ಸಿರಾಜ್‌ ಒಂದು ಪಂದ್ಯದಲ್ಲಿ ಎರಡು ಮೇಡನ್‌ ಓವರ್‌ ಮಾಡುವ ಮೂಲಕ ಐಪಿಎಲ್‌ ಮತ್ತು ಟಿ 20 ಇತಿಹಾಸದಲ್ಲಿ ಯಾರು ಮಾಡದ ದಾಖಲೆಯನ್ನು ಮಾಡಿ ಮೂರನೇ ದಾಖಲೆಗೆ ಕಾರಣವಾದ್ರು.
  4. ಆರ್‌ಸಿಬಿ ಹುಡುಗರ ನಾಲ್ಕನೇ ದಾಖಲೆ ನೋಡೋದಾದ್ರೆ ಮೊಹಮ್ಮದ್‌ ಸಿರಾಜ್‌ 2ಮೇಡನ್‌ ಓವರ್‌ ಮಾಡೋ ಜೊತೆಯಲ್ಲಿ 3 ವಿಕೆಟ್‌ ಪಡೆದು ಮೇಡನ್‌ ಓವರ್‌ನಲ್ಲಿ ವಿಕೆಟ್‌ ಪಡೆದ ಮೊದಲ ಬೌಲರ್‌ ಅನ್ನೋ ದಾಖಲೆಗೆ ಪಾತ್ರರಾದ್ರು.
  5. ಒಂದು ರನ್‌ ನೀಡದೆ ಮೂರು ವಿಕೆಟ್‌ ಕಿತ್ತ ಎರಡನೇ ಬೌಲರ್‌ ಅನ್ನೋ ಪಾತ್ರಕ್ಕೆ ಸಿರಾಜ್‌ ಪಾತ್ರರಾಗೋ ಮೂಲಕ ಆರ್‌ಸಿಬಿ ಹುಡುಗ್ರು 5 ನೇ ದಾಖಲೆ ನಿರ್ಮಿಸಿದ್ದಾರೆ.

6 ಆರನೇ ದಾಖಲೆ ನೋಡೋದಾದ್ರೆ ಒಂದು ಪಂದ್ಯದಲ್ಲಿ ಅತಿ ಹೆಚ್ಚು ಡಾಲ್‌ ಬಾಲ್‌ ಮಾಡೋ ಮೂಲಕ ಮೊಹಮ್ಮದ್‌ ಸಿರಾಜ್‌ ಈ ದಾಖಲೆಯನ್ನು ಆರ್‌ಸಿಬಿ ತಂಡಕ್ಕೆ ತಂದುಕೊಟ್ಟಿದ್ದಾರೆ.

  1. ಒಂದು ಪಂದ್ಯದಲ್ಲಿ 20 ಓವರ್‌ನಲ್ಲಿ 4 ಮೇಡನ್‌ ಓವರ್‌ಗಳನ್ನು ಮಾಡೋ ಮೂಲಕ ಮಾರಿಸ್‌,ಸಿರಾಜ್‌ ಮತ್ತು ವಾಷಿಂಗ್‌ಟನ್‌ ಸುಂದರ್‌ 7 ದಾಖಲೆಯನ್ನು ಆರ್‌ಸಿಬಿ ತಂಡದ ರೆಕಾರ್ಡ್‌ ಬುಕ್‌ ನೀಡಿದ್ದಾರೆ.
  2. ಪವರ್‌ ಪ್ಲೇ ನಲ್ಲಿ ಮೂರು ಓವರ್‌ ಮಾಡಿ ಕೇವಲ 2ರನ್‌ ನೀಡುವ ಮೂಲಕ ಬೆಸ್ಟ್‌ ಎಕಾನಾಮಿಕ್‌ ಬೌಲರ್‌ ಆಗಿದ್ದು 8 ದಾಖಲೆಗೆ ಮತ್ತೆ ಸಿರಾಜ್‌ ಕಾರಣ ಕರ್ತರಾಗಿದ್ದಾರೆ.
  3. ಇನ್ನು 9ನೇ ದಾಖಲೆಯನ್ನು ಆರ್‌ಸಿಬಿ ತಂಡದ ನಾಯಕ ಕಿಂಗ್‌ ಕೊಹ್ಲಿ ಮಾಡಿದ್ದು
    ವಿರಾಟ್‌ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ 18ರನ್‌ ಗಳಿಸಿ ಅದರಲ್ಲಿ ಎರಡು ಬೌಂಡರಿಗಳನ್ನು ಬಾರಿಸೋ ಮೂಲಕ ಐಪಿಎಲ್‌ನಲ್ಲಿ 500 ಪೋರ್‌ಗಳನ್ನು ಸಿಡಿಸಿದ ಎರಡನೇ ಆಟಗಾರ ಅನ್ನೋ ದಾಖಲೆಯನ್ನ ವಿರಾಟ್‌ ಕೊಹ್ಲಿ ಮಾಡಿದ್ರು, ಮೊದಲ ಸ್ಥಾನದಲ್ಲಿ ಶಿಖತ್‌ ಧವನ್‌ ಇದ್ದು 575 ಪೋರ್‌ಗಳನ್ನು ಹೊಡೆದು ಮೊದಲ ಸ್ಥಾನದಲ್ಲಿದ್ದಾರೆ. ಆ ಮೂಲಕ ನಿನ್ನೆಯ ಕೆಕೆಆರ್‌ ವಿರುದ್ಧ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಜೊತೆಯಲ್ಲಿ ಆರ್‌ಸಿಬಿ ಒಂದೇ ಪಂದ್ಯದಲ್ಲಿ ನವರಾತ್ರಿಯ 9 ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಆರ್‌ಸಿಬಿಯ ಈ 9 ದಾಖಲೆ ಬಗ್ಗೆ ನಿಮ್ಮ ಕಾಮೆಂಟ್‌ ಏನು ಅನ್ನೋದನ್ನ ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top