ನನ್ನನ್ನು ತಂಡದಿಂದ ಕೈ ಬಿಡಿ ಪ್ಲೀಸ್‌ ಎಂದ ಧೋನಿ..!

ಟೀಂ ಇಂಡಿಯಾದ ಕೂಲ್‌ ಕ್ಯಾಪ್ಟನ್‌ ಅಂತಾನೇ ಕರೆಸಿಕೊಳ್ತಾ ಇದ್ದ ಎಂಎಸ್‌ ಧೋನಿ ಟೀಂ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ತಾರೋ ಇಲ್ಲವೋ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದ್ರೆ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಐಪಿಎಲ್‌ಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿರುವ ವೇಳೆಯೇ ಈಗ ಧೋನಿ ಮಹತ್ವದ ವಿಷಯವೊಂದನ್ನು ಈಗ ಹೊರಹಾಕಿದ್ದಾರೆ. ಧೋನಿ 2021ರ ಹರಾಜಿನಲ್ಲಿ ತಮ್ಮನ್ನು ಚೆನ್ನೈ ತಂಡದಿಂದ ಕೈಬಿಡುವಂತೆ ಚೆನ್ನೈ ಫ್ರಾಂಚೈಸಿಗೆ ಮನವಿ ಮಾಡಿದ್ದಾರಂತೆ,

ಫ್ರಾಂಚೈಸಿಗಳು ಬೇರೆ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟು ನಂತರದಲಲಿ ಆರ್‌ ಟಿ ಎಂ ಮೂಲಕ ಕಡಿಮೆ ಹಣಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರಂತೆ.
ಧೋನಿಯ ತಂಡಕ್ಕಾಗಿ ತಮ್ಮ ಹಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ಧೋನಿಯ ಮಹತ್ವ ನಮಗೆ ಚೆನ್ನಾಗಿ ಅರಿವಿದೆ ಆದ್ದರಿಂದ ಅವರನ್ನು ಹರಾಜಿನಲ್ಲಿ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್‌ ಹೇಳಿದೆ.
ಇನ್ನು 2020ರಲ್ಲಿ ಧೋನಿ ಐಪಿಎಲ್‌ ಆಡುವುದು ಖಚಿತವಾಗಿದ್ದು., 2021ರಲ್ಲಿ ಹರಾಜಿನಲ್ಲಿ ತಂಡದಿಂದ ಧೋನಿ ಕೈಬಿಟ್ಟು ನಂತರ ಮತ್ತೆ ಆರ್‌ಟಿಎಂ ಮೂಲಕ ಕಡಿಮೆ ಹಣಕ್ಕೆ ಧೋನಿಯನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ ಎಂದು ಚೆನ್ನೈ ಫ್ರಾಂಚೈಸಿ ಈ ವಿಷಯವನ್ನು ಖಚಿತಪಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top