ನನ್ನನ್ನು ಕೊಲೆ ಮಾಡು ಎಂದು ದೀಪಿಕಾಗೆ ಬೇಡಿಕೊಂಡ ರಣ್ವೀರ್ ಸಿಂಗ್..!

ಬಾಲಿವುಡ್ ಬ್ಯೂಟಿ ಕಪಲ್ ಅಂದ್ರೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.. ಆದ್ರೆ ಈಗ ರಣ್ವೀರ್ ಸಿಂಗ್ ತನ್ನ ಪತ್ನಿ ದೀಪಿಕಾಗೆ ನನ್ನ ಕೊಲೆ ಮಾಡು ಎಂದು ಬೇಡಿಕೆ ಇಟ್ಟಿದ್ದಾರೆ. ಆದ್ರೆ ಈ ರೀತಿ ಬೇಡಿಕೆ ಇಡಲು ಕಾರಣವೂ ಇದೇ, ಇತ್ತಿಚೆಗೆ ದೀಪಿಕಾ ತನ್ನ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು ಇದಕ್ಕೆ ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಅಭಿಮಾನಿಗಳು ಕಮೆಂಟ್ ಮಾಡಿದ್ರು, ಇನ್ನು ಈ ಪೋಸ್ಟ್ ಗೆ ರಣ್ವೀರ್ ಕೂಡ ಕಾಮೆಂಟ್ ಪೋಸ್ಟ್ ಮಾಡಿದ್ದು, ನನ್ನನ್ನು ಕೊಲ್ಲು ಎಂದು ಪೋಸ್ಟ್ ಮಾಡಿದ್ದಾರೆ.

ದೀಪಿಕಾ ತನ್ನ ಫೋಟೋವನ್ನು ಪೋಸ್ಟ್ ಮಾಡಿ ‘ತಾಡಾ’ ಅಂತ ಪೋಸ್ಟ್ ಮಾಡಿದ್ದು ಈ ಫೋಟೋಗೆ ಆಲಿಯಾ,ಫರಾನ್, ಸೇರಿದಂತೆ ಅನೇಕರು ಕಮೆಂಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಕಾಣೋ ದೀಪಿಕಾ ಸೌಂದರ್ಯಕ್ಕೆ ಸೋತ ಪತಿ ರಣ್ವೀರ್ ಸಿಂಗ್ ಕೂಡ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top