ನನ್ನನ್ನು ಇನ್ನು ಸುಂದರವಾಗಿಸೋರು ಯಾರು ಎಂದು ಕಣ್ಣೀರಿಟ್ಟ ಅನುಷ್ಕಾ ಶರ್ಮಾ..!

ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಕಣ್ಣೀರಿನಲ್ಲಿ ಮುಳುಗಿದ್ದಾರೆ. ತಮ್ಮ ಮೇಕಪ್ ಆರ್ಟಿಸ್ಟ್ ನಿಧನರಾದ ಹಿನ್ನಲೆ ದುಃಖ ತಪ್ತರಾದ ಅನುಷ್ಕಾ ತಮ್ಮ ಮೇಕಪ್ ಆರ್ಟಿಸ್ಟ್ ಸುಭಾಷ್ ವಂಗಲ್ ಅವರನ್ನು ನೆನೆದು ಭಾವನಾತ್ಮಕ ಪತ್ರವನ್ನು ಬರೆದು ಇನ್ಟ್ಸಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಬ್ಬು ಜೊತೆ ಕಾಲ ಕಳೆದ ದಿನಗಳನ್ನು ನೆನದು ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.

ಸುಬ್ಬು ಒಬ್ಬ ಕರುಣಾಮಯಿ, ಸರಳ ಹಾಗೂ ಅದ್ಭುತ ವ್ಯಕ್ತಿ. ಯಾವಾಗಲೂ ಪ್ರೀತಿಯಿಂದ ಮಾಸ್ಟರ್ ಎಂದು ಕರೆಯುತ್ತಿದ್ದೆ. ಅವರು ದೇಶದ ಅತ್ಯಂತ ಪ್ರೀತಿಯ ಹಾಗೂ ಗೌರವಾನ್ವಿತ ಕಲಾವಿದ. ಸುಭಾಶ್ ತಮ್ಮ ಟ್ಯಾಲೆಂಟ್‍ನಿಂದ ನನಗೆ ಯಾವಾಗಲೂ ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತಿದ್ದರು. ಅವರ ಈ ಅದ್ಭುತವಾದ ಕೆಲಸ ಹಾಗೂ ಟ್ಯಾಲೆಂಟ್ ಅನ್ನು ನಾನು ಯಾವಾಗಲೂ ನೆನಪು ಮಾಡಕೊಳ್ಳುತ್ತೇನೆ. ಇಂದು ಒಂದು ಒಳ್ಳೆಯ ಮಗ, ಸಹೋದರ ಹಾಗೂ ಪವಿತ್ರ ಆತ್ಮ ನಮ್ಮನ್ನು ಬಿಟ್ಟು ಹೋಗಿದೆ. ನಿನ್ನ ಆತ್ಮಕ್ಕೆ ದೇವರು ಶಾಂತಿ ನೀಡಲಿ ಸುಬ್ಬು ಎಂದು ಕಣ್ಣೀರಿನ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top