ನಡು ರಸ್ತೆಯಲ್ಲಿ ಹುಡುಗಿಯನ್ನು ರೇಗಿಸಿದ ಹುಚ್ಚಾ ವೆಂಕಟ್ ಅರೆಸ್ಟ್..!

ಹುಚ್ಚಾ ವೆಂಕಟ್ ಹುಚ್ಚಾಟ ಮತ್ತೆ ಹೆಚ್ಚಾದಂತೆ ಕಾಣ್ತಾ ಇದೆ. ಹೋದಲ್ಲೆಲ್ಲ ಒಂದಿಲ್ಲೊಂದು‌ ಕಿತಾಪತಿಗಳನ್ನು ಮಾಡಿಕೊಂಡು ಗ್ರಾಮಸ್ಥರ ಬಳಿ‌ ಧರ್ಮದೇಟು ತಿನ್ನುತಿರೋ ಹುಚ್ಚಾ ವೆಂಕಟ್ ಇಂದು‌ ಮತ್ತೊಂದು ಹುಚ್ಚಾಟ ನಡೆಸಿ ಪೊಲೀಸರ ಅಥಿತಿಯಾಗಿದ್ದಾನೆ. ದೊಡ್ಡಬಳ್ಳಾಪುರ ಟೋಲ್ ಬಳಿ ಹುಚ್ಚನಂತೆ ಓಡಾಡಿಕೊಂಡು ಹುಚ್ಚಾಟವಾಡಿರೋ ವೆಂಕಟ್, ಅಲ್ಲೇ ಹೋಗುತ್ತಿದ್ದ ಹುಡುಗಿಯನ್ನು ರೇಗಿಸಿ ಚುಡಾಯಿಸುತ್ತಿರೋ ವಿಡಿಯೋ ವೈರಲ್ ಆಗಿದೆ, ಇ‌ನ್ನು ಈ ಟೋಲ್ ಬಳಿ ಜನರು ಹೋಗಲು‌ ಹೆದರುತ್ತಿದ್ದು ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ,ಸದ್ಯ ಹುಚ್ಚಾ ವೆಂಕಟ್ ಪೊಲೀಸರ ಅಥಿತಿಯಾಗಿದ್ದಾನೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top