ನಟ ಸೋನು ಸೂದ್ ವಿರುದ್ಧ ದಾಖಲಾಯ್ತು ಕೇಸ್

ಲಾಕ್‌ಡೌನ್ ಟೈಂನಲ್ಲಿ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದ ಜನರಿಗೆ ಅವರ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಿ,ತೊಂದರೆಯಲ್ಲಿ ಇದ್ದವರಿಗೆ ಸಹಾಯ ಮಾಡಿ ಎಲ್ಲರ ಮನ ಗೆದಿದ್ದ ನಟ ಸೋನು ಸೂದ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಮುಂಬೈ ಮುನ್ಸಿಪಲ್ ಕಾರ್ಫೋರೇಶನ್ ಪ್ರಕರಣ ದಾಖಲಿಸಿದೆ. ಸೋನು ಸೂದ್ ಮುಂಬೈನ ಜುಹುವಿನಲ್ಲಿ ೬ ಮಹಡಿಯ ಕಟ್ಟ ಇದ್ದು, ಈ ಕಟ್ಟಡವನ್ನು ಹೋಟೆಲ್ ಆಗಿ ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಸಿ ನಟ ಸೋನು ಸೂದ್‌ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅನುಮತಿ ಪಡೆಯದೆ ಕಟ್ಟಡವನ್ನು ಹೋಟೆಲ್ ಆಗಿ ಬದಲಾಯಿಸಿದ್ದು, ೨೦೨೦ ಅಕ್ಟೋಬರ್‌ನಲ್ಲಿ ಸೋನು ಸೂದ್ ಅವರಿಗೆ ಮೊದಲ ಬಾರಿ ನೋಟಿಸ್ ನೀಡಲಾಗಿತ್ತು, ಆದ್ರೆ ನವೆಂಬರ್ ೨೭ ವರೆಗೂ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಒಂದು ತಿಂಗಳಾದರೂ ಉತ್ತರ ನೀಡಿಲ್ಲ ಎಂದು ಬಿಎಂ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

ಜವರಿ ೪ರಂದು ಸೋನು ಸೂದ್ ಆಸ್ತಿ ಬಗ್ಗೆ ಮತ್ತೆ ಪರಿಶೀಲನೆ ನಡೆಸಿದ್ದು ಈ ವೇಳೆ ಅನಧಿಕೃತ ಹೆಚ್ಚುವರಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಇದುವರೆಗೂ ನೀಡಿರುವ ಸೂಚನೆಗಳಿಗೆ ನಟ ಪ್ರತಿಕ್ರಿಯಿಸಿಲ್ಲ ಎಂದು ಅಧಿಕಾರಿಗಳು ದೂರಿದ್ದು, ದೂರು ಸ್ವಿಕರಿಸಿರೋ ಪೊಲೀಸರು ನಟನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top