ನಟ ಸೋನು ಸೂದ್‌ಗೆ ಒಲಿಯಿತು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

ನಟ ಸೋನು ಸೂದ್‌ ಲಾಕ್‌ಡೌನ್‌ ಸಂಧರ್ಭದಲ್ಲಿ ಅದೆಷ್ಟೋ ಲಕ್ಷಾಂತರ ಜನರ ಪಾಲಿನ ಆಪತ್ಭಾಧವರಾಗಿದ್ದವರು, ಲಾಕ್‌ಡೌನ್‌ ಟೈಂನಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಹಳ್ಳಿಗಳಿ, ಅವರ ಊರುಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದವರು.

ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದ ನಟ ಸೋನು ಸೂದ್‌ಗೆ ಇದೀಗ ವಿಶ್ವ ಸಂಸ್ಥೆ ಗೌರವಿಸಿದೆ. ಲಾಕ್‌ಡೌನ್‌ ಟೈಂನಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ದೇಶದ ಜನರ ಹೃದಯ ಗೆದ್ದಿದ್ದ ನಟ ಮಾನವೀಯ ಕಾರ್ಯವನ್ನು ಗುರುತಿಸಿ ವಿಶ್ವಸಂಸ್ಥೆ ಯುಎನ್‌ಡಿಪಿಯ ವಿಶೇಷ ಎಸ್‌ಡಿಜಿ ʻವಿಶೇಷ ಮಾನವೀಯ ಕ್ರಿಯೆ ಪ್ರಶಸ್ತಿ ನೀಡಿ ಗೌರವಿಸಿದೆ.

ಸೋಮವಾರ ಸಂಜೆ ಈ ಕಾರ್ಯಕ್ರಮ ನಡೆದಿದ್ದು, ಆನ್‌ಲೈನ್‌ ಸಮಾರಂಭದಲ್ಲಿ ನಟ ಸೋನು ಸೂದ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನು ಪ್ರಶಸ್ತಿ ಪಡೆದ ನಂತರ ಸೋನು ಸೂದ್‌ ಮಾತನಾಡಿದ್ದು ಯಾವುದೇ ಅಪೇಕ್ಷೆ ಇಲ್ಲದೇ ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top