
ತಮಿಳು ಸ್ಟಾರ್ ನಟ ಧನುಷ್ ಮತ್ತು ನಟ ರಾಜಕಾರಣಿ ವಿಜಯ್ಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಧನುಷ್ ಮತ್ತು ವಿಜಯ್ಕಾಂತ್ ಮನೆಗಳಿಗೆ ಭೇಟಿನೀಡಿ ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಏನೂ ಸಿಗಲಿಲ್ಲ.ಹೀಗಾಗಿ ಇದು ಸುಳ್ಳು ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನುಷ್ ಮತ್ತು ವಿಜಯಕಾಂತ್ ಇಬ್ಬರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಎರಡು ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿದೆ, ಕೂಡಲೇ ಎಚ್ಚೆತ್ತ ಪೊಲೀಸರು, ಇಬ್ಬರ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕರೆ ಸುಳ್ಳು ಎಂದು ಸ್ಪಷ್ಟಪಡಿಸಿಕೊಡಿದ್ದಾರೆ. ಎರಡು ಕರೆಗಳು ಒಬ್ಬನೇ ಮಾಡಿರೋದಾಗಿ ತಿಳಿದಿದ್ದು, ಆರೋಪಿಯ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.
ಈ ಹಿಂದೆ ರಜಿನಿ,ವಿಜಯ್ ಮತ್ತು ಸೂರ್ಯ ,ಅಜಿತ್ ಮನೆಯಲ್ಲೂ ಬಾಂಬ್ ಇರಿಸಿರುವುದಾಗಿ ಬೆದರಿಕೆ ಕರೆ ಬಂದಿತ್ತು, ಆಗಲೂ ಶೋಧ ನಡೆಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಇದೀಗ ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಈ ಘಟನೆ ನಡೆದಿದ್ದು, ಈ ಕರೆಗಳನ್ನು ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಧನುಷ್ ಮತ್ತು ವಿಜಯಕಾಂತ್ ಮನೆಗಳಿಗೆ ಬೆದರಿಕೆ ಕರೆ ಬಂದಿದ್ದು, ಈ ಕರೆಯನ್ನು ಓರ್ವ ವ್ಯಕ್ತಿಯೇ ಮಾಡಿದ್ದಾನೋ ಇಲ್ಲವೋ ಅನ್ನೋ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿಲ್ಲ