ನಟ ದರ್ಶನ್ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಿಂಗ್ಯಾಕ್ ಅಂದ್ರು..!

ಬಾಕ್ಸಾಫಿಸ್ ಸುಲ್ತಾನ್, ಡಿಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆನೇ ಸರಳತೆ, ಮಾನವೀಯತೆ ಅನ್ನೋದು ಎಲ್ಲಾರಿಗೂ ಗೊತ್ತು.. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ಹೊಸ ಪ್ರಯತ್ನದ ಸಿನಿಮಾಗಳು ಬರ್ತಾ ಇದೆ ಅಂದ್ರೆ ಅವರ ಜೊತೆ ಕೈ ಜೋಡಿಸೋಕೆ ಯಾವಾಗ್ಲೂ ಡಿ ಬಾಸ್ ರೆಡಿಯಾಗಿರ್ತಾರೆ.. ಇನ್ನು ಒಬ್ಬ ಸ್ಟಾರ್ ಇನ್ನೊಬ್ಬ ಸ್ಟಾರ್‍ನನ್ನು ಹೊಗಳೋ ಗುಣವಿದೆ ಅಂದ್ರೆ ಅದು ಡಿಬಾಸ್ ಅವರಿಗೆ ಮಾತ್ರ ಅಂತಾನೇ ಹೇಳ ಬಹುದು..

ಹೌದು ಅದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ,ಧಮಯಂತಿ ಸಿನಿಮಾದ ಆಡಿಯೋ ರಿಲೀಸ್ ಮಾತನಾಡಿದ ಡಿ ಬಾಸ್ ಯಾವುದೇ ಒಂದು ಕೆಲಸ ಮಾಡಬೇಕಾದ್ರೆ ಅದಕ್ಕೆ ಡೆಡಿಕೇಶನ್ ಇರಬೇಕು..ಡೆಡಿಕೇಶನ್ ಇಲ್ಲಾ ಅಂದ್ರೆ ಏನು ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ರು. ಇದೇ ವೇಳೆ
ರಾಧಿಕಾ ಒಂದು ಸಿನಿಮಾ ನನಗಿಂತ ಸೀನಿಯರ್..ನೀಲಾ ಮೇಘ ಶಾಮ ಅವರದ್ದು ಫಸ್ಟ್ ಅಮೇಲೆ ನಾವು ಮೆಜೆಸ್ಟಿಕ್ ಸಿನಿಮಾ ಮೂಲಕ ಬಂದವರು,ಎಲ್ರಿಗೂ ಎಲ್ಲಾ ಸಿಗುತ್ತೆ ಆದ್ರೆ ಯಾವಾಗ ನಿಮ್ಮ ಕೆಲಸದ ಮೇಲೆ ಡೆಡಿಕೇಶನ್ ಇರಲ್ವೋ ಆಗ ಏನೂ ಮಾಡೋಕು ಆಗೋಲ್ಲ ಅಂತ ಹೇಳಿದ್ರು,ರಾಧಿಕಾ ಕಾಲದ ಯಾವ ನಾಯಕಿಯರು ಈಗ ಸ್ಯಾಂಡಲ್‍ವುಡ್‍ನಲ್ಲಿ ಇಲ್ಲಾ, ಆದ್ರೆ ರಾಧಿಕಾ ನಟಿಸ್ತಾ ಇದ್ದಾರೆ,ಅಂದ್ರೆ ಅದು ಅವರಲ್ಲಿ ಇರೋ ಕೆಲಸದ ಮೇಲಿನ ಪ್ರೀತಿ, ಆಸೆಯೇ ಅವರನ್ನು ಇಲ್ಲಿವರೆಗೂ ತಂದಿರೋದು,ಅಂತ ಹೇಳಿದ ಡಿ ಬಾಸ್.. ಧಮಯಂತಿ ಸಿನಿಮಾದ ಟ್ರೈಲರ್ ನೋಡಿ ನಾನೇ ಒಂದು ಸಾರಿ ಹೌ ಹಾರಿದೆ..

ಚಿತ್ರ ಚೆನ್ನಾಗಿ ಮೂಡಿ ಬಂದಿದೆ,ಎಲ್ಲರಿಗೂ ಒಳ್ಳೆದಾಗ್ಲಿ ಅಂತ ಹೇಳಿದ್ರು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿ ರಾಧಿಕಾ ಕುಮಾರ ಸ್ವಾಮಿ ನನ್ನ ಸಿನಿಮಾದ ಆಡಿಯೋ ರಿಲೀಸ್ ಡಿಬಾಸ್ ಮಾಡಿದ್ದು ನನಗೆ ಬರ್ತ್‍ಡೇಗೆ ಸಿಕ್ಕ ದೊಡ್ಡ ಗಿಫ್ಟ್ ಅಂತ ಹೇಳಿದ್ರು, ಡಿ ಬಾಸ್ ಬಂದಿರೋದ್ರಿಂದ ಸಿನಿಮಾಗೆ ಗಜ ಬಲ ಬಂದಂತಾಗಿದೆ.. ಡಿ ಬಾಸ್ ಇದ್ರೆ ಅಲ್ಲಿ ಎನರ್ಜಿ ಜಾಸ್ತಿ ಅದು ಈ ಕಾರ್ಯಕ್ರಮದಲ್ಲೂ ಕಾಣಿಸ್ತಾ ಇದೆ ಅಂತ ರಾಧಿಕಾ ಕುಮಾರ ಸ್ವಾಮಿ ಡಿಬಾಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ರು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top