ನಟ ಚಿಕ್ಕಣ್ಣಗೆ ಡಿ ಬಾಸ್‌ ಹುಷಾರು ಅಂತ ಹೇಳಿದ್ಯಾಕೆ..

ಕಾಮಿಡಿ ಕಿಂಗ್‌ ಚಿಕ್ಕಣ್ಣ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಉಪಾಧ್ಯಕ್ಷರಾಗಲು ಹೊರಟಿದ್ದಾರೆ. ಅಂದ್ರೆ ಚಿಕ್ಕಣ್ಣ ಇದುವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಕಾಮಿಡಿ ಕಿಂಗ್‌ ಆಗಿ ಗುರುತಿಸಿಕೊಂಡಿದ್ದು, ಇನ್ನು ಮುಂದೆ ಅವ್ರು ಉಪಾಧ್ಯಕ್ಷ ಚಿತ್ರದ ಮೂಲಕ ಹೀರೋ ಆಗಿ ಸಹ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಉಪಾಧ್ಯಕ್ಷ ಚಿತ್ರ ಸ್ಕ್ರಿಪ್ಟ್‌ ಪೂಜೆ ಅರ್ಜುನ್‌ ಜನ್ಯಾ ಸ್ಟುಡಿಯೋದಲ್ಲಿ ನಡೆದಿದ್ದು, ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಇದೀಗ ಚಿಕ್ಕಣ್ಣನಿಗೆ ದರ್ಶನ್‌ ಕೂಡ ಸಲಹೆ ನೀಡಿದ್ದಾರೆ. ಚಿಕ್ಕಣ್ಣ ಮತ್ತು ಡಿ ಬಾಸ್‌ ಲಾಕ್‌ಡೌನ್‌ ಟೈಂನಲ್ಲಿ ಆದಷ್ಟು ಒಟ್ಟಿಗೆ ಕಾಲಕಳೆದಿದ್ದು, ಆಗಾಗೇ ಕಾಡು ಮೇಡು ಎಲ್ಲಾ ಸುತ್ತಿಕೊಂಡು ಬಂದಿದ್ದಾರೆ. ಇದೀಗ ಚಿಕ್ಕಣ್ಣ ಹೀರೋ ಆಗುತ್ತಿರೋ ಸುದ್ದಿ ಕೇಳಿ ದರ್ಶನ್‌ ಚಿಕ್ಕಣ್ಣ ಅವರಿಗೆ ಸಲಹೆಯನ್ನ ನೀಡಿದ್ದಾರೆ. ಹೌದು ಚಿಕ್ಕಣ್ಣ ಅವರಿಗೆ ಡಿ ಬಾಸ್‌ ಹುಷಾರಾಗಿ ಹ್ಯಾಂಡಲ್‌ ಮಾಡು, ನೀನು ನೀನಾಗಿರು ಅನ್ನೋ ಮೂಲಕ ಹೀರೋ ಆಗುತ್ತಿರೋ ಚಿಕ್ಕಣ್ಣ ಅವರಿಗೆ ಡಿ ಬಾಸ್‌ ಸಲಹೆಯನ್ನ ನೀಡಿದ್ದಾರೆ. ಉಪಾಧ್ಯಕ್ಷ ಚಿತ್ರಕ್ಕೆ ಚಂದ್ರಮೋಹನ್‌ ನಿರ್ದೇಶನ ಮಾಡ್ತಾ ಇದ್ದು, ಉಮಾಪತಿ ಶ್ರೀನಿವಾಸ್‌ ಬಂಡವಾಳ ಹಾಕ್ತಾ ಇದ್ದು, ಚಿತ್ರಕ್ಕೆ ಅರ್ಜುನ್‌ ಜನ್ಯ ಮ್ಯೂಸಿಕ್‌ ಮೋಡಿ ಇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top