
ಡ್ರಗ್ಸ್ ಮಾಫಿಯಾ ಆರೋಪದಡಿ ಜೈಲು ವಾಸ ಅನುಭವಿಸುತ್ತಿರೋ ನಟಿ ಸಂಜನಾ ಗಲ್ರಾನಿಯ ಒಂದು ಪ್ರಮಾಣ ಪತ್ರ ಇದೀಗ ಬಹಿರಂಗವಾಗಿದೆ. ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಈ ಸರ್ಟಿಫಿಕೆಟ್ ಬಿಡುಗಡೆಯಾಗಿದ್ದು, ಇದರಲ್ಲಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು, ಸಂಜನ ಗಲ್ರಾನಿ, ಹೆಸರು ಮಹೀರಾ ಎಂದು ಬದಲಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ನಿಮೂಧಿಸಿದೆ.
ಸಂಜನಾ ಗಲ್ರಾನಿ 2018 ಆಗಸ್ಟ್ 9 ರಂದು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಈ ಪ್ರಮಾಣ ಪತ್ರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಪತ್ರ ಅಸಲಿಯೋ ಅಥವಾ ನಕಲಿಯೋ ಇನ್ನು ತಿಳಿಯಬೇಕಾಗಿದೆ. ಇದರ ಬಗ್ಗೆ ಈ ವರೆಗೂ ಯಾರು ಪ್ರತಿಕ್ರಿಯೆ ನೀಡಿಲ್ಲ.