ನಟಿ ರಾಗಿಣಿ ಮನೆ ಮಾರಾಟಕ್ಕಿದೆ..!

ಡ್ರಗ್‌ ಮಾಫಿಯಾ ಕೇಸ್‌ನಲ್ಲಿ ನಟಿ ರಾಗಿಣಿ ಜೈಲು ಪಾಲಾಗಿದ್ದು, ರಾಗಿಣಿಯನ್ನು ೧ನೇ ಎಸಿಎಂಎಂ ಕೋರ್ಟ್‌ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಹೇಳಿದೆ. ಹೀಗಿರುವಾಗಲೇ ಇತ್ತ ರಾಗಿಣಿ ಜೈಲು ಪಾಲಾಗುತ್ತಿದ್ದಂತೆ ಮಗಳ ಮನೆಯನ್ನು ಅವರ ತಂದೆ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯಲಹಂಕದ ಬಳಿ ಇರೋ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿ ರಾಗಿಣಿಯ ಫ್ಲ್ಯಾಟ್‌ ಇದ್ದು, ಇದೀಗ ಆ ಫ್ಲ್ಯಾಟ್‌ನ್ನು ನಟಿ ರಾಗಿಣಿ ತಂದೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ, ಇನ್ನು ಈ ಫ್ಲ್ಯಾಟ್‌ ಅನ್ನು ಎರಡು ಕೋಟಿಗೆ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಫ್ಯ್ಲಾಟ್‌ನ ಮಾಲೀಕರು ರಾಗಿಣಿ ತಂದೆಯೇ ಆಗಿದ್ದು, ೩ ಬಿಹೆಚ್‌ಕೆಯಾ ಈ ಫ್ಲ್ಯಾಟ್‌ ಅನ್ನು ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top