ನಟಿ ಕಂಗನಾ ವಿರುದ್ಧ ತುಮಕೂರಿನಲ್ಲಿ ದೂರು ದಾಖಲು..

ಕೇಂದ್ರ ಸರ್ಕಾರದ ರೈತ ಮಸೂದೆ ವಿರುದ್ಧ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ ಕಂಗನಾ ಪ್ರತಿಭಟನಾಕಾರರು ಭಯೋತ್ಪಾದಕರು ಎಂದು ಬಾಲಿವುಡ್‌ ನಡಿ ಕಂಗನಾ ಟ್ವೀಟ್‌ ಮಾಡಿದ್ದು, ಈ ವಿಚಾರವಾಗಿ ಇದೀಗ ಕಂಗನಾ ವಿರುದ್ಧ ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ವಕೀಲರಾದ ರಮೇಶ್‌ ನಾಯಕ್‌,ಕಂಗನಾ ವಿರುದ್ಧ ಕ್ರಮ ತೆಗೆದುಕೊಳ್ಳುಬೇಕು ಎಂದು ಇ ಮೇಲ್‌ ಮೂಲಕ ಮೊದಲ ಡಿಐಜಿಗೆ ದೂರು ನೀಡಿದ್ದರು. ಆದ್ರೆ ಯಾವುದೇ ರೀತಿಯ ದೂರು ದಾಖಲಿಸಿಕೊಳ್ಳದ ಕಾರಣ, ಇದೀಗ ರಮೇಶ್‌ ನಾಯಕ್‌ ನ್ಯಾಯಾಲದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top