ನಟರಾಜನ್ ವಿಕೆಟ್ ಪಡೆದಾಗ ಸಂಭ್ರಮಿಸೋಲ್ಲ ಯಾಕೆ ಗೊತ್ತಾ

ಟೀಂ ಇಂಡಿಯಾದ ಅಂತ್ಯದ ಕಿರಿಯ ವಿಕೆಟ್ ಕೀಪರ್ ಅಂತ ಅನಿಸಿಕೊಂಡಿದ್ದ, ಆರ್‍ಸಿಬಿಯ ಆಟಗಾರ ಪಾರ್ಥಿವ್ ಪಟೇಲ್ ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಧಿಡೀರ್ ಶಾಕ್ ನೀಡಿದ್ದಾರೆ. 18 ವರ್ಷಗಳ ಸುಧೀರ್ಘ ಕ್ರಿಕೆಟ್‍ಗೆ ಪಾರ್ಥಿವ್ ಪಟೇಲ್ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಟ್ವೀಟರ್‍ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದು, ಆ ಮೂಲಕ ತಮಗೆ ವೃತ್ತಿ ಜೀವನದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. 2002ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಪಾರ್ಧಿವ್ ಪಟೇಲ್ ಒಟ್ಟು 25 ಟೆಸ್ಟ್ ಪಂದ್ಯ, 38 ಏಕದಿನ ಪಂದ್ಯ ಮತ್ತು 2 ಟಿ 20 ಪಂದ್ಯಗಳನ್ನು ಆಡಿದ್ದು 2018ರಲ್ಲಿ ಅವರು ಆಡಿದ ಕೊನೆಯ ಅಂತರಾಷ್ಟ್ರಿಯ ಪಂದ್ಯವಾಗಿದೆ. ಇದೀಗ 18 ವರ್ಷಗಳ ತಮ್ಮ ಕ್ರಿಕೆಟ್ ಜರ್ನಿಗೆ ನಿವೃತ್ತಿ ಘೋಷಿಸಿದ್ದು. ಮುಂದಿನ ನಿರ್ಧಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ,

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಗಮನ ಸೆಳೆದ ಆಟಗಾರ ಟಿ ನಟರಾಜನ್, ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ನೆಟ್ ಬೌಲರ್ ಆಗಿ ಆಸ್ಟ್ರೇಲಿಯಾಗೆ ತೆರಳಿದ್ದ ನಟರಾಜನ್ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದ ನಂತರ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದು ಸಿಕ್ಕ ಅವಕಾಶವನ್ನು ಉತ್ತಮವಾಗಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಇದೀಗ ನಟರಾಜನ್ ಈ ವಿಚಾರವಾಗಿ ಮಾತನಾಡಿದ್ದು, ಟಿ 20 ಸರಣಿ ಕೊನೆಯ ಪಂದ್ಯ ಮುಗಿದ ನಂತರ ಮುರುಳಿ ಕಾರ್ತಿಕ್ ಜೊತೆ ಮಾತನಾಡುವ ವೇಳೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ನಾನು ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದು ನನ್ನ ಅದೃಷ್ಟ, ತಂಡದಲ್ಲಿ ಎಲ್ಲರ ಸಪೋರ್ಟ್‍ನಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ನನ್ನ ಸ್ಟ್ರೆಂಥ್ ಆದ ಯಾರ್ಕರ್ ಮತ್ತು ಸ್ಲೋ ಬೌಲಿಂಗ್‍ನಿಂದಾಗಿ ಆಸ್ಟ್ರೇಲಿಯಾ ಅಂತಹ ಬಲಿಷ್ಠ ತಂಡದ ಎದುರು ಉತ್ತಮ ಪ್ರದರ್ಶನ ನೀಡಲು ಸಹಾಯವಾಯ್ತು,ಈ ವಿಚಾರವಾಗಿ ನನಗೆ ಹೆಮ್ಮೆ ಅನಿಸುತ್ತಿದೆ ಅಂತ ಹೇಳಿದ್ದು, ವಿಕೆಟ್ ಪಡೆದಾಗ ಹೆಚ್ಚು ಸೆಲೆಬ್ರೆಷನ್ ಮಾಡದೆ ಸ್ಮೈಲ್ ಮಾತ್ರ ಮಾಡ್ತೀರಾ ಅಂತ ಕಾರ್ತಿಕ್ ಕೇಳಿದ ಪ್ರಶ್ನೆಗೆ ಅಗ್ರೆಶನ್ ನನಗೆ ಸೂಕ್ತವಲ್ಲ, ಏನೇ ಬರಲಿ ತಾಳ್ಮೆಯಿಂದಲೇ ಎದುರಿಸುತ್ತೇನೆ, ಅದೇ ರೀತಿ ವಿಕೆಟ್ ಪಡೆದಾಗವಾಗಲಿ ಅಥವಾ ರನ್ ಹೊಡೆಸಿಕೊಂಡಾಗ ಆಗಲಿ ನಾನು ಅಗ್ರೆಶನ್ ತೋರಿಸಲು ಇಷ್ಟ ಪಡುವುದಿಲ್ಲ ನನ್ನದು ತಾಳ್ಮೆ ಸ್ವಭಾವ ಅಂತ ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ಬ್ಯಾಟ್ಸಮನ್‍ಗಳು ಸಹ ಬೌಲಿಂಗ್ ವಿಚಾರದಲ್ಲಿ ಪರಣಿತಿ ಹೊಂದ ಬೇಕು ಎಂದು ಮಾಜಿ ಕ್ರಿಕೆಟರ್ ಸುರೇಶ್ ರೈನಾ ಹೇಳಿದ್ದಾರೆ. ತಂಡದಲ್ಲಿ ಬ್ಯಾಟ್ಸಮನ್‍ಗಳು ಬೌಲಿಂಗ್ ಮಾಡಲು ಕಲಿತಿರ ಬೇಕು, ಆಗ ತಂಡದ ನಾಯಕನಿಗೆ ಆಯ್ಕೆಗಳು ಸಿಗಲಿದೆ, ಆ ಮ್ಯಾಚ್‍ನಲ್ಲಿ ಅನುಕೂಲ ಆಗಲಿದೆ ಅಂತ ಹೇಳಿದ್ದಾರೆ. ನಾವೂ ಹಳ್ಳಿಗಳಲ್ಲಿ ಆಡುವಾಗ ಬ್ಯಾಟಿಂಗ್ ಜೊತೆಯಲ್ಲಿ ಬೌಲಿಂಗ್ ಬರುತ್ತಿದ್ದರೆ ಮಾತ್ರ ತಂಡದಲ್ಲಿ ಆಡುವ ಅವಕಾಶಗಳು ಸಿಗುತ್ತಿತ್ತು, ಅದೇ ರೀತಿ ಟೀಂ ಇಂಡಿಯಾದಲ್ಲೂ ಬ್ಯಾಟ್ಸಮನ್‍ಗಳು ಬೌಲಿಂಗ್‍ನಲ್ಲೂ ಸಮರ್ಥರಿದ್ದರೆ ನಾಯಕನಿಗೆ ಹೆಚ್ಚಿನ ಆಯ್ಕೆ ದೊರೆಯಲಿದೆ ಎಂದು ರೈನಾ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹಿಂದೆ ಸಚಿನ್, ಸೆಹ್ವಾಗ್, ಯುವರಾಜ್ ಸಿಂಗ್ ಬ್ಯಾಟಿಂಗ್ ಜೊತೆಯಲ್ಲಿ ಬೌಲಿಂಗ್‍ನಲ್ಲೂ ಸಮರ್ಥರಾಗಿದ್ದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸುತ್ತಿದ್ದರು ಅಂತ ಹೇಳಿದ್ದು, ಪ್ರತಿ ತಂಡದ ನಾಯಕನಿಗೂ ನಾಲ್ಕರಿಂದ ಐದು ಓವರ್ ಬೌಲಿಂಗ್ ಮಾಡಬಲ್ಲ ಸಾಮಥ್ರ್ಯದ ಬ್ಯಾಟ್ಸಮನ್ ಇರುವುದು ಮುಖ್ಯ, ಬ್ಯಾಟ್ಸಮನ್ ಬೌಲಿಂಗ್ ಮಾಡಬಲ್ಲ ಸಾಮಥ್ರ್ಯ ಹೊಂದಿರ ಬೇಕು ಆಗ ತಂಡಕ್ಕೆ ಸಹಕಾರಿಯಾಗಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುರೇಶ್ ರೈನಾ ಹೇಳಿದ ರೀತಿ ತಂಡದಲ್ಲಿ ಬ್ಯಾಟ್ಸಮನ್ ಬೌಲಿಂಗ್ ಸಾಮಥ್ರ್ಯ ಹೊಂದಿರಬೇಕು ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಏನೂ, ನಟರಾಜನ್ ಅವರ ಮಾತಿನ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top