ನಟರಾಜನ್ ಟೀಂ ಇಂಡಿಯಾಗೆ ಸಿಕ್ಕ ಮಾಣಿಕ್ಯ ಎಂದ ಮಾಜಿ ಆಟಗಾರ

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಸರಣಿಯಲ್ಲಿ ಮೊದಲ ಎರಡು ಏಕದಿನ ಪಂದ್ಯ ಹೊರತು ಪಡಿಸಿ ಉಳಿದ ಪಂದ್ಯ ಮತ್ತು ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಹುಡುಗರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಪಾದಾರ್ಪಣೆ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾದ ಭರವಸೆಯ ಬೌಲರ್ ಆಗಿದ್ದಾರೆ ಟಿ ನಟರಾಜನ್. ಸದ್ಯ ಒಂದು ಏಕದಿನ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದು, ಎರಡು ಟಿ 20 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅಂತಾನೇ ಬಿಂಬಿತವಾಗಿರೋ ಟಿ ನಟರಾಜನ್ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಕ್ರಿಕೆಟ್ ದಂತಕತೆ ಗ್ಲೆನ್ ಮೆಗ್ರಾತ್ ಮಾತನಾಡಿದ್ದು, ನಟರಾಜನ್ ಬೌಲಿಂಗ್ ಪ್ರದರ್ಶನ ನೋಡಿ ಮೆಚ್ಚಿಕೊಂಡಿದ್ದು, ಭಾರತ ತಂಡಕ್ಕೆ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಕ್ಕಿರುವ ಮಾಣಿಕ್ಯ ಎಂದು ಹಾಡಿ ಹೊಗಳಿದ್ದಾರೆ. ನಟರಾಜನ್ ಅವರ ಬೌಲಿಂಗ್ ನನ್ನ ಗಮನ ಸೆಳೆದಿದೆ ಅವರು ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಸಿಕ್ಕ ಮಾಣಿಕ್ಯ, ಅವರು ಇದೇ ರೀತಿ ಪ್ರದರ್ಶನವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ ಎಂದು ಮೆಗ್ರಾತ್ ನಟರಾಜನ್ ಅವರನ್ನು ಹೊಗಳಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಬಾರಿ ಟೀಂ ಇಂಡಿಯಾಗೆ ನಟರಾಜ್ ಅನ್ನೋ ವೇಗಿ ದೊರಕಿದ್ರೆ, 2015-16ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಹೋದ ವೇಳೆ ಜಸ್‍ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ದೊರಕಿದ್ರು, ಇನ್ನು 2019ರಲ್ಲಿ ಮಯಾಂಕ್ ಅಗರ್‍ವಾಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂಟ್ರಿ ಕೊಡೋ ಮೂಲಕ ಭರವಸೆಯ ಬ್ಯಾಟ್ಸಮನ್ ಆಗಿ ಹೊರ ಹೊಮ್ಮಿದ್ದು ಇತಿಹಾಸವಾಗಿದೆ.

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಇರೋ ಹೊಡಿ ಬಡಿ ದಾಂಡಿಗ ಹಾರ್ಧಿಕ್ ಪಾಂಡ್ಯ ಸತತ ಎರಡು ಪಂದ್ಯಗಳನ್ನು ಟೀಂ ಇಂಡಿಯಾಗೆ ಗೆಲ್ಲಿಸಿಕೊಡುವ ಮೂಲಕ ತಂಡದ ಅಪತ್ಭಾಂದವರಾಗಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾರ್ಧಿಕ್ ಪಾಂಡ್ಯ ಅವರನ್ನು ಹೊಗಳಿದ್ದು, ಮುಂದಿನ 4-5 ವರ್ಷಗಳ ಕಾಲ ತಂಡದಲ್ಲಿ ಉಳಿಯ ಬಲ್ಲ ಪ್ರತಿಭಾನ್ವಿತ ಆಟಗಾರ ಹಾರ್ದಿಕ್ ಪಾಂಡ್ಯ , ಹಾರ್ಧಿಕ್ ಪಾಂಡ್ಯ ಒಬ್ಬ ನ್ಯಾಚುರಲ್ ಪ್ರತಿಭೆ, ಐಪಿಎಲ್ ಮತ್ತು ಇಂಟರ್‍ನ್ಯಾಷನಲ್ ಪಂದ್ಯಗಳನ್ನು ಆಡಿ ಅನುಭವಿಯಾಗಿದ್ದಾರೆ ಅವರು ಮುಂದಿನ ನಾಲ್ಕರಿಂದ ಐದು ವರ್ಷ ತಂಡದಲ್ಲೇ ಉಳಿಸಿಕೊಳ್ಳಬಲ್ಲ ಮಿಡಲ್ ಆರ್ಡರ್ ಆಟಗಾರ ಅವರು ಏನು ಅವರು ಸಾಮಥ್ರ್ಯ ಏನು ಅನ್ನೋದು ಅವರಿಗೆ ಗೊತ್ತಿದೆ ಅವರು ತಂಡದಲ್ಲಿ ಪ್ರಮುಖ ಪಾತ್ರವಹಿಸೋ ಆಟಗಾರ ಅಂತ ಕೊಹ್ಲಿ ಹಾಡಿ ಹೊಗಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಭಾರತ ಸರಣಿಯ ಮುಂದಿನ ಪಂದ್ಯಗಳಿಗೆ ಇದೀಗ ಎರಡು ತಂಡಗಳಿಗೂ ಆಘಾತವಾಗಿದೆ. ಟಿ 20 ಸರಣಿ ಮುಗಿಯುತ್ತಿದ್ದಂತೆ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದೀಗ ಎರಡು ತಂಡಗಳಿಗೂ ಆಘಾತ ಉಂಟಾಗಿದೆ. ಹೌದು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಈಗಾಗಲೇ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದು ಸದ್ಯ ಟೂರ್ನಿಯಿಂದ ಹೊರ ಉಳಿದಿದ್ದು, ಮೊದಲ ಟಿಸ್ಟ್ ಪಂದ್ಯಕ್ಕೆ ವಾರ್ನರ್ ಅಲಭ್ಯರಾಗಿದ್ರೆ, ಇತ್ತ ಟೀಂ ಇಂಡಿಯಾದಲ್ಲೂ ಗಾಯದ ಸಮಸ್ಯೆ ಉಂಟಾಗಿದೆ. ಮೊದಲ ಟಿ 20 ಪಂದ್ಯದಲ್ಲಿ ತಲೆಗೆ ಬಾಲ್ ಬಡಿದು ಗಾಯದ ಸಮಸ್ಯೆಗೆ ಒಳಗಾಗಿದ್ದು ರವೀಂದ್ರ ಜಡೇಜಾ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆ ಮೂಲಕ ಎರಡು ತಂಡಗಳಲ್ಲಿ ಗಾಯದ ಸಮಸ್ಯೆ ಎದುರಾಗಿದ್ದು ತಂಡಕ್ಕೆ ದೊಡ್ಡ ನಷ್ಟವಾಗಲಿದೆ.

ಹಾಗಾದ್ರೆ ನಿಮ್ಮ ಪ್ರಕಾರ ನಟರಾಜ್ ಟೀಂ ಇಂಡಿಯಾಗೆ ಸಿಕ್ಕ ಬೆಸ್ಟ್ ಬೌಲರ್ ಅಂತ ಅನಿಸುತ್ತದೆಯಾ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಬಗ್ಗೆ ಕೊಟ್ಟ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top