ಧ್ರುವ ಸರ್ಜಾ ಇನ್ಮೇಲೆ ʻದುಬಾರಿʼ ಹುಡುಗ

ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪೊಗರು ಜೋಡಿ ಧ್ರುವಾ ಮತ್ತು ನಂದಕಿಶೋರ್‌ ಕಾಂಭಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಅಂತ ಹೇಳಲಾಗಿತ್ತು, ಇದೀಗ ಇವರಿಬ್ಬರ ಕಾಂಭಿನೇಷನ್‌ನಲ್ಲಿ ಬರ್ತಾ ಇರೋ ಸಿನಿಮಾ ಇಂದು ಸೆಟ್ಟೇರಿದೆ. ಇನ್ನು ಈ ಚಿತ್ರಕ್ಕೆ ದುಬಾರಿ ಅನ್ನೋ ಟೈಟಲ್‌ ಇಡುವ ಮೂಲಕ ಧ್ರುವ ಸರ್ಜಾ ಐ ಆ್ಯಮ್‌ ವೆರಿ ವೆರಿ ಕಾಸ್ಲ್ಟೀ ಅಂತ ʻದುಬಾರಿʼ ಚಿತ್ರದ ಮುಹೂರ್ತವನ್ನು ನೆರವೇರಿಸಿದ್ದಾರೆ.

ಸಹೋದರ ಚಿರಂಜೀವಿ ಅಗಲಿಕೆಯ ಬಳಿಕ ಹೊಸ ಸಿನಿಮಾಗೆ ಕೈ ಹಾಕಿದ್ದು, ಇಂದು ಬೆಳಗ್ಗೆ ದುಬಾರಿ ಚಿತ್ರದ ಮುಹೂರ್ತ ನವರಂಗ್‌ ಬಳಿ ವರಸಿದ್ಧಿವಿನಾಯ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರೆವೇರಿಸಿದ್ರು. ಈ ಚಿತ್ರಕ್ಕೆ ನಂದಕಿಶೋರ್‌ ಆಕ್ಷನ್‌ ಕಟ್‌ ಹೇಳ್ತಾ ಇದ್ದು, ಮೂಹೂರ್ತದ ನಂತರ ಮಾಡನಾಡಿದ ಧ್ರುವ, ಇದು ನನ್ನ ೫ನೇ ಸಿನಿಮಾ , ದುಬಾರಿ ಅಂತ ಟೈಟಲ್‌ ಇಟ್ಟಿದ್ದು ಇದರಲ್ಲಿ ಪೊಗರು ಸಿನಿಮಾಗೆ ಕೆಲಸ ಮಾಡಿದವರೇ ಇಲ್ಲೂ ಕೆಲಸ ಮಾಡಲಿದ್ದಾರೆ ಅಂತ ಹೇಳಿದ್ದಾರೆ.

ಇನ್ನು ಒಂದು ವಾರದಲ್ಲಿ ಫೋಟೋ ಶೂಟ್‌ ಮಾಡಲಿದ್ದು, ಇದರಲ್ಲಿ ಗೆಟಪ್‌ ಚೇಂಚ್‌ ಇರುತ್ತದೆ. ಡಿಸೆಂಬರ್‌ ಮೊದಲನೇ ವಾರದಿಂದ ಶೂಟಿಂಗ್‌ ಆರಂಭವಾಗಲಿದ್ದು, ಎಲ್ಲಾರೂ ಸೇರಿ ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇವೆ ಅಂತ ಧ್ರುವಾ ಸರ್ಜಾ ಹೇಳಿದ್ದಾರೆ. ಇನ್ನು ಈ ಚಿತ್ರದಲ್ಲಿ ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ ಕೂಡ ನಟಿಸ್ತಾ ಇರೋದು ವಿಶೇಷವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top