
ಅಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ,ನಂದ ಕಿಶೋರ್ ಕಾಂಭಿನೇಷನ್ನ ಸಿನಿಮಾ ಪೊಗರು ಈಗಾಗಲೇ ರಿಲೀಸ್ಗೆ ರೆಡಿಯಿದ್ದು, ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಈಗಾಗಲೇ ಕರಾಬು ಹಾರಿನ ಮೂಲಕ ಮೋಡಿ ಮಾಡಿರೋ ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗಲಿದ್ದು, ಈಗಾಗಲೇ ಧ್ರುವಾ ಫ್ಯಾನ್ಸ್ ಪೊಗರು ಸಿನಿಮಾಗಾಗಿ ಕಾಯುತ್ತಿದ್ದಾರೆ. ಪೊಗರು ಸಿನಿಮಾ ರಿಲೀಸ್ಗೂ ಮುಂಚೆಯೇ ಧ್ರುವ ಮತ್ತು ನಂದ ಕಿಶೋರ್ ಜೋಡಿ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದು ಚಿತ್ರಕ್ಕೆ ದುಬಾರಿ ಅನ್ನೋ ಟೈಟಲ್ ಕೂಡ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನೆರವೇರಿಸಿದ್ದು ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಉದಯ್ ಮೆಹ್ತಾ ನಿರ್ಮಾಣದ ದುಬಾರಿ ಚಿತ್ರದಲ್ಲಿ ಧ್ರುವಾ ಅವರಿಗೆ ಜೋಡಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಧ್ರುವಾ ಮತ್ತು ನಂದ ಕಿಶೋರ್ ಕಾಂಭೀನೇಷನ್ನ ಎರಡನೇ ಸಿನಿಮಾ ದುಬಾರಿ ಚಿತ್ರಕ್ಕೆ ಇದೀಗ ನಾಯಕಿಯಾಗಿ ಕಿಸ್,ಭರಾಟೆ ಖ್ಯಾತಿಯ ಶ್ರೀ ಲೀಲಾ ಆಯ್ಕೆಯಾಗಿದ್ದು ಈ ವಿಚಾರವನ್ನು ಸ್ವತಃ ನಿರ್ದೇಶಕ ನಂದ ಕಿಶೋರ್ ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.
ಇನ್ನು ದುಬಾರಿ ಚಿತ್ರದಲ್ಲಿ ಧ್ರುವಾಗೆ ಜೋಡಿಯಾಗಿ ಪರಭಾಷೆಯ ನಾಯಕಿಯರನ್ನು ಕರೆತರಲಾಗುತ್ತದೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಆದ್ರೆ ಕೊನೆಯದಾಗಿ ಕನ್ನಡದ ಹುಡುಗಿ ದುಬಾರಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಇನ್ನು ದುಬಾರಿ ಚಿತ್ರದಲ್ಲಿ ಕೇವಲ ಒಬ್ಬ ನಾಯಕಿ ಮಾತ್ರ ಇರೋದಿಲ್ವಂತೆ ಶ್ರೀ ಲೀಲಾ ಜೊತೆಯಲ್ಲಿ ಇನ್ನು ಇಬ್ಬರು ನಾಯಕಿಯರು ಇರಲಿದ್ದಾರೆ ಅನ್ನೋ ಮಾಹಿತಿ ಇದ್ದು,ಇದೀಗ ದುಬಾರಿ ಚಿತ್ರಕ್ಕೆ ಶ್ರೀಲೀಲಾ ಜೊತೆಯಲ್ಲಿ ಇನ್ನು ಉಳಿದ ನಾಯಕಿಯರು ಯಾರು ಅನ್ನೋ ಕುತೂಹಲ ಹುಟ್ಟಿಕೊಂಡಿದೆ.
ಹಾಗಾದ್ರೆ ದುಬಾರಿ ಚಿತ್ರದಲ್ಲಿ ಧ್ರುವಾಗೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದು. ಉಳಿದ ನಾಯಕಿಯರು ಯಾರು ದುಬಾರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.