ಧೋನಿ ವಿರುದ್ಧ ಗರಂ ಆದ ಮಾಜಿ ಕ್ರಿಕೆಟರ್‌ ಶ್ರೀಕಾಂತ್‌..

ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಅಂಡ್‌ ಟೀಂಗೆ ಲಕ್‌ ಕುಲಾಯಿಸಲಿಲ್ಲ, ಐಪಿಎಲ್‌ ಪ್ರಾರಂಭದಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಉದ್ದಕ್ಕೂ ಟೀಕೆಗಳನ್ನು ಎದುರಿಬೇಕಾಯಿತು, ಅದರಲ್ಲೂ ಕ್ಯಾಪ್ಟನ್‌ ಕೂಲ್‌ಗೆ ಈ ಬಾರಿಯ ಐಪಿಎಲ್‌ನಲ್ಲಿ ಲಕ್‌ ಕೈಕೊಟ್ಟಿದ್ದು, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಪಂದ್ಯ ಅವರ ಯಾವ ಐಡಿಯಾಗಳು ಸಹ ವರ್ಕೌಟ್‌ ಆಗುತ್ತಿಲ್ಲ. ಈಗಾಗಲೇ ಪ್ಲೇ ಆಫ್‌ನಿಂದ ದೂರ ಉಳಿದಿರೋ ಚೆನ್ನೈ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.

ಒಂದು ಚಾಂಪಿಯನ್‌ ತಂಡ ಆಡೋ ಆಟವಲ್ಲ ಎಂದು ಚೆನ್ನೈ ತಂಡ ಅಭಿಮಾನಿಗಳು ಮತ್ತು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ಪಡುತ್ತಿದ್ದಾರೆ. ಇನ್ನು ಕೇವಲ ಧೋನಿ ಮಾತ್ರವಲ್ಲ, ಚೆನ್ನೈ ತಂಡದ ಉಳಿತ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ರೆ, ಧೋನಿ ತಂಡದ ಆಯ್ಕೆಯಲ್ಲಿ ವಿಫಲರಾಗಿದ್ದಾರೆ ಎಂದು ದಿಗ್ಗಜ ಕ್ರಿಕೆಟರ್‌ಗಳು ಹೇಳುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟ್‌ ವಿರೇಂದ್ರ ಸೆಹ್ವಾಗ್‌ ಚೆನ್ನೈ ತಂಡದ ಕಾಲೆಳೆದಿದ್ದು, ಇದೊಂದು ಟೆಸ್ಟ್‌ ಟೀಂ ಅಂತ ಕಾಲೆಳೆದಿದ್ರು,ಇದೀಗ ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಧೋನಿ ವಿರುದ್ಧ ಗರಂ ಆಗಿದ್ದಾರೆ.

ಹೌದು ನಿನ್ನೆ ನಡೆದ ರಾಜಸ್ತಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 125ರನ್‌ಗಳಿಸುವ ಮೂಲಕ ಸೋಲು ಚೆನ್ನೈ ತಂಡ ಸೋಲನುಭವಿಸಿದ್ದು, ಇದೀಗ ಧೋನಿ ವಿರುದ್ಧ ಶ್ರೀಕಾಂತ್‌ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ʻಚೆನ್ನೈ ತಂಡದ ಆಯ್ಕೆ ಈ ಬಾರಿ ದುರಂತವಾಗಿದೆ. ಈ ಧೋನಿ ಜಗದೀಶನ್‌ ನಂತರ ಪ್ರತಿಭೆಯನ್ನು ಗುರುತಿಸುತ್ತಿಲ್ಲ, ಆತನ ಬಳಿ ಸ್ಪಾರ್ಕ್‌ ಇಲ್ಲ ಎಂದು ಕಥೆ ಕಟ್ಟುತ್ತಿದ್ದಾನೆ. ನಿಧಾನವಾಗಿ ಟಿ೨೦ಯಲ್ಲಿ ಟೆಸ್ಟ್‌ ಮ್ಯಾಚ್‌ ಆಡುತ್ತಿರೊ ಕೇದಾರ್‌ ಜಾಧವ್‌ನಲ್ಲಿ ಅದೆಂತಹ ಸ್ಪಾರ್ಕ್‌ ಧೋನಿ ಕಂಡಿದ್ದಾನೆ ಅಂತ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಧೋನಿ ವಿರುದ್ಧ ಶ್ರೀಕಾಂತ್‌ ಗರಂ ಆಗಿದ್ದಾರೆ.

ಇನ್ನು ಕೇದಾರ್‌ ಜಾದವ್‌ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಟಿ20ಯಲ್ಲಿ ಟೆಸ್ಟ್‌ ಮ್ಯಾಚ್‌ ಆಡುತ್ತಿದ್ದಾನೆ ಎಂದು ಟೀಕೆ ಕೂಡ ಮಾಡಿದ್ರು, ಇನ್ನು ಜಗದೀಶನ್‌ ಕೂಡ ಕೊಟ್ಟ ಒಂದು ಮ್ಯಾಚ್‌ನ ಅವಕಾಶದಲ್ಲಿ 30ರನ್‌ ಸಿಡಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ರು, ತಂಡದಲ್ಲಿ ಆಯ್ಕೆ ಮಾಡಿಕೊಳ್ಳುವಲ್ಲಿ ಧೋನಿ ಆಸಕ್ತಿ ತೋರದೆ ಇರೋದು ಅನೇಕ ಕೆಂಗಣ್ಣಿಗೆ ಗುರಿಯಾಯ್ತು, ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಚೆನ್ನೈ ತಂಡದ ಅಭಿಮಾನಿಗಳ ಸಿಟ್ಟಿಗೆ ಧೋನಿ ಅಂಡ್‌ ಟೀಂ ಗುರಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top