ಧೋನಿ ಲೆಕ್ಕಾಚಾರಗಳು ಉಲ್ಟಾ ಹೊಡೀತಿರೋದ್ಯಾಕೆ..?

ಐಪಿಎಲ್‌ 2020ಯ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್‌ ತಂಡ ಭರ್ಜರಿ ಗೆಲುವು ಸಾಧಿಸಿದೆ. ಅನುಭವಿ ತಂಡದ ವಿರುದ್ಧ ಯುವ ಆಟಗಾರರ ತಂಡ 2ನೇ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆದ್ರೆ ನಿನ್ನೆ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್‌ ಜಯಭೇರಿ ಬಾರಿಸಿದ್ರೆ. ಇತ್ತ ಚೆನ್ನೈ ತಂಡ ಸತತ ಎರಡನೇ ಸೋಲು ಅನುಭವಿಸಿದ್ದು ಇಲ್ಲಿ ಧೋನಿ ತಂಡದ ಲೆಕ್ಕಾರದಲ್ಲಿ ಎಡವಿದ್ದೆಲ್ಲಿ ಅನ್ನೋ ಪ್ರಶ್ನೆಗಳು ಮೂಡುತ್ತವೆ.

ಇನ್ನು ಚೆನ್ನೈ ತಂಡ ಪ್ರಮುಖವಾಗಿ ಎರಡು ಪಂದ್ಯಗಳ ಸೋಲಿಗೆ ಪ್ರಮುಖ ಕಾರಣವನ್ನು ನೋಡೋದಾದ್ರೆ.

ಧೋನಿ ಅಂಡ್‌ ಟೀಂ ಎದುರಾಳಿ ತಂಡದ ಪ್ರಾರಂಭಿಕ ಆಟಗಾರರನ್ನು ಬಹು ಬೇಗ ಕಟ್ಟಿಹಾಕುವಲ್ಲಿ ವಿಫಲರಾಗುತ್ತಿರುವುದು ಎದ್ದು ಕಾಣುತ್ತಿದೆ. ರಾಜಸ್ತಾನ್‌ ರಾಯಲ್ಸ್‌ ಮತ್ತು ಡೆಲ್ಲಿ ತಂಡಗಳ ಪ್ರಾರಂಭಿಕ ಆಟಗಾರರನ್ನು ಕಟ್ಟಿಹಾಕುವಲ್ಲಿ ವಿಫಲವಾಗಿದ್ದು ಸೋಲಿಗೆ ಕಾರಣವಾಯಿತು.

ಇನ್ನು ಚೆನ್ನೈ ತಂಡದಲ್ಲಿ ನಂಬಿಕಸ್ಥ ಆಟಗಾರರಲ್ಲಿ ಜಡೇಜಾ ಕೂಡ ಒಬ್ಬರು ಆದ್ರೆ ಜಡೇಜಾ ಐಪಿಎಲ್‌ ಶುರುವಾದಾಗಿನಿಂದ ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಜೊತೆಗೆ ಬೌಲಿಂಗ್‌ನಲ್ಲಿ ದುಬಾರಿಯಾಗಿರುವುದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಚೆನ್ನೈ ತಂಡದಲ್ಲಿ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳು ಉತ್ತಮ ಇನ್ನಿಂಗ್ಸ್‌ ಕಟ್ಟಿಕೊಡುವುದರಲ್ಲಿ ವಿಫಲರಾಗಿರುವುದು ವಿಜಯ್‌ ಮತ್ತು ವ್ಯಾಟ್ಸನ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿಹಾಕುವಲ್ಲಿ ವಿಫಲರಾಗಿರುವುದು ತಂಡದ ಸೋಲಿ ಪ್ರಮುಖ ಕಾರಣವಾಗಿದೆ.

ಇದರ ಜೊತೆಯಲ್ಲಿ ತಂಡಕ್ಕೆ ಆಸರೆಯಾಗಿ ಡುಪ್ಲೆಸಿ ನಿಂತು ಹೋರಾಟ ನಡೆಸುತ್ತಿದ್ದರು ಡುಪ್ಲೆಸಿಗೆ ಉತ್ತಮ ಸಾಥ್‌ ಸಿಗದೇ ಇರುವುದು ತಂಡದ ಗೆಲುವಿನ ಹಾದಿ ಕಠಿಣವಾಗುತ್ತಾ ಹೋಗುತ್ತಿದೆ.

ಪ್ರಮುಖವಾಗಿ ಧೋನಿ ತಂಡಕ್ಕೆ ಬೇಕಾದ ಸಮಯದಲ್ಲಿ ಬ್ಯಾಟಿಂಗ್‌ಗೆ ಬರೆದೆ ಇರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಇದು ಚೆನ್ನೈ ತಂಡದ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

ಇದರ ಜೊತೆಯಲ್ಲಿ ಅಂಬಟಿ ರಾಯುಡು ಅನುಪಸ್ಥಿತಿ ತಂಡಕ್ಕೆ ಪ್ರಮುಖವಾಗಿ ಕಾಡುತ್ತಿದ್ದು, ರಾಯುಡು ಸ್ಥಾನವನ್ನು ತುಂಬಲು ಯಾವ ಆಟಗಾರನಿಗೂ ಸಾಧ್ಯವಾಗದೇ ಇರುವುದು ತಂಡದ ವೈಫಲ್ಯಕ್ಕೆ ಪ್ರಮುಖ ಕಾರಣ ಅಂದರೆ ತಪ್ಪಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನು ಮುಂದಿನ ಪಂದ್ಯಗಳಲ್ಲಿ ಧೋನಿ ಯಾವ ಸರಿಪಡಿಸಿ ಕೊಂಡು ಆಡಿದ್ರೆ ಈ ಬಾರಿ ಚೆನ್ನೈ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top