ಧೋನಿಯ ಈ ಕೆಲಸಕ್ಕೆ ನೀವೂ ಸೆಲ್ಯೂಟ್‌ ಹೊಡಿಯೋದು ಗ್ಯಾರಂಟಿ..!

ಟೀಂ ಇಂಡಿಯಾದ ಕೂಲ್‌ ಕ್ಯಾಪ್ಟನ್‌ ಅಂತಾನೇ ಕರೆಸಿಕೊಳ್ಳೋ ಧೋನಿ, ಸದ್ಯ ಯಾವಾಗ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡ್ತಾರೆ, ಯಾವಾಗ ಕ್ರಿಕೆಟ್‌ಗೆ ನಿವೃತ್ತಿ ಹೊಂದುತ್ತಾರೆ ಅನ್ನೋ ಮಾತುಗಳು ಪ್ರತಿದಿನ ಕೇಳ್ತಾನೆ ಇದ್ದೇವೆ, ಆದ್ರೆ ಈಗ ಧೋನಿ ಸುದ್ದಿಯಾಗಿರೋದು ಮಾತ್ರ ಕ್ರಿಕೆಟ್‌ ವಿಚಾರಕ್ಕೆ ಅಲ್ಲ ಬದಲಿಗೆ ಸೇನಾ ವಿಚಾರವಾಗಿ. ಹೇಳಿ ಕೇಳಿ ಧೋನಿಗೆ ಭಾರತೀಯ ಸೇನೆ ಮೇಲೆ ಎಲ್ಲಿಲ್ಲದ ಪ್ರೀತಿ ಅಭಿಮಾನ, ಅಲ್ಲದೇ ಸ್ವತಃ ಸೇನೆಯ ಪ್ಯಾರಾಚೂಟ್‌ ರೆಜಿಮೆಂಟ್‌ನ ಗೌರವ ಲೆಫ್ಟಿನೆಂಟ್‌ ಆಗಿದ್ದು, ಕಾಶ್ಮೀರಕ್ಕೆ ಹೋಗಿ ಸೇನೆಯಲ್ಲಿ 15 ದಿನಗಳ ಕಾಲ ವಿಶ್ವಕಪ್‌ ಪಂದ್ಯವನ್ನು ಮುಗಿಸಿಕೊಂಡು ಬಂದು ಕಾರ್ಯ ನಿರ್ವಹಿಸಿದ್ದರು.

ಸದ್ಯ ಈಗ ಧೋನಿ ಹೊಸದೊಂಡು ಸಾಹಸಕ್ಕೆ ಕೈ ಹಾಕಿದ್ದು, ಧೋನಿ ಭಾರತೀಯ ಸೇನೆಯ ಸೇನಾನಿಗಳ ಕಥೆಯನ್ನು ಸರಣಿ ರೂಪದಲ್ಲಿ ಹೊರತರಲು ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದ್ದು. ಧೋನಿಯ ಈ ಹೊಸ ಸಹಾಸಕ್ಕೆ ಸ್ಟುಡಿಯೋ ನೆಕ್ಸ್ಟ್‌ ಕೂಡ ಕೈಜೋಡಿಸಿದೆ. 2020ರಲ್ಲಿ ಈ ಸರಣಿ ರಿಲೀಸ್‌ ಆಗಲಿದೆ.

ಇನ್ನು ಈ ಸರಣಿಯಲ್ಲಿ ಪರಮವೀರ ಚಕ್ರ ಹಾಗೂ ಅಶೋಕ ಚಕ್ರ ಪಡೆದ ಯೋಧರ ರೋಚಕ ಮತ್ತು ಕುತೂಹಲ ಬದುಕಿನ ಘಟನಾವಳಿಯನ್ನು ತೋರಿಸೋ ಪ್ರಯತ್ನ ನಡೆಯಲಿದ್ದು, ಸದ್ಯ ಇದರ ಸ್ಕ್ರಿಪ್ಟ್‌ ವರ್ಕ್‌ ನಡೀತಾ ಇದ್ದು ,ಸದ್ಯದರಲ್ಲೇ ಶೂಟಿಂಗ್‌ ಪ್ಲಾನ್‌ ಮಾಡಿಕೊಳ್ಳಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top