
ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಂ ಇಂಡಿಯಾ ಏಕದಿನ ಸರಣಿ ಸೋತರು, ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾದ ಆಟಗಾರರ ಪಟ್ಟಿ ಪ್ರಕಟವಾಗುತ್ತಿದ್ದಂತೆ ಅನೇಕರು ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿರಬೇಕಿತ್ತು, ಇವರಿರಬೇಕಿತ್ತು, ಎಂದು ಹೇಳುತ್ತಿದ್ದರು, ಅದರಲ್ಲೂ ಟೀಂ ಇಂಡಿಯಾದ ಫ್ಯಾನ್ಸ್ಗಳಂತು ಈ ಒಬ್ಬ ಆಟಗಾರರನ್ನು ಹೆಚ್ಚಾಗಿ ಮಿಸ್ ಮಾಡಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಸ್ ಯು ಅನ್ನೋ ಬೋರ್ಡ್ಗಳು ಕಾಣಿಸಲು ಶುರುವಾದವು, ಹೌದು ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಹುಡುಗರು ಕ್ರಿಕೆಟ್ ಪ್ರಿಯರು ಮಿಸ್ ಮಾಡಿಕೊಳ್ಳುತ್ತಿರೋ ವ್ಯಕ್ತಿ ಅಂದ್ರೆ ಅದು ಎಂ ಎಸ್ ಧೋನಿ, ಏಕದಿನ ಸರಣಿ ಮತ್ತು ಟಿ 20 ಸರಣಿಯಲ್ಲಿ ಪಂದ್ಯ ನಡೆಯುವ ವೇಳೆ ವಿ ಮಿಸ್ ಯು ಧೋನಿ ಅನ್ನೋ ಬೋರ್ಡ್ಗಳನ್ನು ಹಿಡಿದು ಸ್ಟೇಡಿಯಂನಲ್ಲಿ ಕೂಗುತ್ತಿರೋ ದೃಶ್ಯಗಳು ಕಂಡಿದ್ದವು ಆ ಮೂಲಕ ಧೋನಿಯನ್ನು ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ತಿದ್ದಾರೆ ಅಂತ ಹೇಳಿದ್ರು, ಇದೀಗ ಕ್ರಿಕೆಟ್ ಅಭಿಮಾನಿಗಳ ಜೊತೆಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೂಡ ಧೋನಿಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಹೇಳಿದ್ದಾರೆ ಎರಡನೇ ಟಿ 20 ಮ್ಯಾಚ್ ವೇಳೆ ಸ್ಟೇಡಿಯಂನಲ್ಲಿ ಮಿಸ್ ಯು ಧೋನಿ ಅನ್ನೋ ಬೋರ್ಡ್ ಹಿಡಿದು ಪ್ರೇಕ್ಷಕರು ಕೂಗಿದಾಗ ಇತ್ತ ವಿರಾಟ್ ಕೊಹ್ಲಿ ಕೂಡ ಮಿ ಟು ಅಂತ ಹೇಳೋ ಮೂಲಕ ತಾನು ಕೂಡ ಟೂರ್ನಿಯಲ್ಲಿ ಧೋನಿಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಂ ಇಂಡಿಯಾದ ಬಗ್ಗೆ ಇದೀಗ ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಮಾತನಾಡಿದ್ದು, ಧೋನಿ ರೀತಿಯಲ್ಲಿ ಈ ಆಟಗಾರ ತುಂಬಾ ಅಪಾಯಕಾರಿ ಅಂತ ಹೇಳಿದ್ದಾರೆ. ಅಂದು ಧೋನಿ ಆರ್ಭಟಿಸಿ ತಂಡವನ್ನು ಗೆಲ್ಲಿಸಿದ್ರು, ಇದೀಗ ಪಾಂಡ್ಯ ಆರ್ಭಟಿಸೋ ಮೂಲಕ ತಂಡವನ್ನುಗೆಲ್ಲಿಸುತ್ತಿದ್ದಾರೆ. ಅಂದು ಧೋನಿ, ಇಂದು ಪಾಂಡ್ಯ ಇವರಿಬ್ಬರ ಆಕ್ರಮಣ ನಿಜಕ್ಕೂ ಆಘಾತಕಾರಿ ಅಂತ ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ನೀವೂ ಕೂಡ ಧೋನಿಯವರನ್ನು ಮಿಸ್ ಮಾಡಿಕೊಳ್ತಿದ್ದೀರಾ, ನಿಮಗೆ ಈ ಬಾರಿಯ ಟೂರ್ನಿಯಲ್ಲಿ ಯಾವ ಆಟಗಾರನನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀರಾ ಕಾಮೆಂಟ್ ಮಾಡಿ ತಿಳಿಸಿ.