
ಮಹೇಂದ್ರ ಸಿಂಗ್ ಧೋನಿ ಆ ಹೆಸರು ಕೇಳಿದಾಕ್ಷಣ ಲಕ್ಷಾಂತರ ಅಭಿಮಾನಿಗಳು ಒಂದು ಬಾರಿ ಖುಷಿ ಪಡ್ತಾರೆ. ಟೀಂ ಇಂಡಿಯಾಗೆ ಐಸಿಸಿಯ ಪ್ರಮುಖ ಟ್ರೋಫಿಗಳನ್ನು ತಂದುಕೊಡುವ ಮೂಲಕ ಸಕ್ಸಸ್ ಫುಲ್ ಕ್ಯಾಪ್ಟನ್ ಅಂತ ಅನಿಸಿಕೊಂಡವರು, ಇನ್ನು ಧೋನಿಗೆ ವಿಶ್ವದಾದ್ಯಂತ ಅಭಿಮಾನಿ ಬಳಗವೇ ಇದೆ. ಇನ್ನು ಇಂಡಿಯಾದಲ್ಲಿ ಧೋನಿಯನ್ನು ಹುಚ್ಚರಂತೆ ಪ್ರೀತಿಸುವ ಜನರು ಇದ್ದಾರೆ. ಇದೀಗ ಅಂತಹದ್ದೇ ಒಬ್ಬ ಅಪರೂಪದ ಅಭಿಮಾನಿ ಧೋನಿಗಾಗಿ ತನ್ನ ಮನೆಯನ್ನೇ ಸಂಪೂರ್ಣ ಧೋನಿ ಮಯ ಮಾಡಿರೋ ವಿಶೇಷವಾದ ಘಟನೆ ನಡೆದಿದೆ.
ಹೌದು ಸದ್ಯ ಐಪಿಎಲ್ ದುಬೈನಲ್ಲಿ ನಡೀತಾ ಇದ್ದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಆಗಿರೋ ಧೋನಿ ಮೇಲಿನ ಅಭಿಮಾನಕ್ಕೆ ಫ್ಯಾನ್ ಒಬ್ಬ ಮನೆಗೆ ಪೂರ್ತಿ ಚೆನ್ನೈ ಸೂಪರ್ ಕಿಂಗ್ಸ್ ಕಲರ್ ಮಾಡಿದ್ದು, ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಲೋಗೊ ಮತ್ತು ಧೋನಿ ಚಿತ್ರವನ್ನು ಬರೆಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ತಮಿಳುನಾಡಿನ ಬಳಿಯ ಅರಂಗೂರ್ ಗ್ರಾಮದ ನಿವಾಸಿಯಾದ ಆರ್.ಗೋಪಿಕೃಷ್ಣನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕೊರೋನಾ ಹಾವಳಿಯಿಂದ ತಮಿಳುನಾಡಿಗೆ ಹಿಂದಿರುಗಿದ್ದಾರೆ. ಇವರು 2008ರಿಂದ ಧೋನಿಯ ಅಪ್ಪಟ್ಟ ಅಭಿಮಾನಿಯಾಗಿದ್ದು, ಐಪಿಎಲ್ ಮ್ಯಾಚ್ ಮಿಸ್ ಮಾಡ್ದೆ ಸ್ಟೇಡಿಯಂನಲ್ಲಿ ನೋಡುತ್ತಿದ್ದರು.ಆದ್ರೆ ಈ ಬಾರಿ ಐಪಿಎಲ್ ದುಬೈನಲ್ಲಿ ನಡೆದರು ಪ್ರೇಕ್ಷಕರಿಗೆ ನೋಡಲು ಅನುಮತಿ ಇಲ್ಲದ ಕಾರಣ ಗೋಪಿಕೃಷ್ಣನ್ ಈ ಬಾರಿ ಐಪಿಎಲ್ ವೀಕ್ಷಿಸಲು ಸಾಧ್ಯವಾಗಿಲ್ಲ.
ಇದೀಗ ತಮಿಳುನಾಡಿಗೆ ಬಂದಿರೋ ಗೋಪಿಕೃಷ್ಣನ್ ತಮ್ಮ ಮನೆಗೆ ಬಣ್ಣ ಹೊಡೆಸುವ ಕೆಲಸಕ್ಕೆ ಕೈ ಹಾಕಿದ್ದರು, ಈ ವೇಳೆ ಐಪಿಎಲ್ ಶುರುವಾಗಿದ್ದು ಧೋನಿ ಉತ್ತಮ ಪ್ರದರ್ಶನ ಕಾಣದೆ ಟೀಕೆಗೆ ಗುರಿಯಾಗಿದ್ದರು, ಹೀಗಾಗಿ ಅವರ ಮೇಲಿನ ಅಭಿಮಾನ ತೋರಲು 1.5 ಲಕ್ಷ ರೂಪಾಯಿ ಖರ್ಚು ಮಾಡಿ ಧೋನಿಯವರ ಚಿತ್ರ ಮತ್ತು ಸಿಎಸ್ಕೆ ಲೋಗೋ ಸಮೇತ ಮನೆಗೆ ಹಳದಿ ಬಣ್ಣವನ್ನು ಹೊಡೆಸಿದ್ದಾರೆ.
ಇದರ ಬಗ್ಗೆ ಮಾಡನಾಡಿರೋ ಗೋಪಿಕೃಷ್ಣನ್,ಈ ಬಾರಿ ಸಿಎಸ್ಕೆಗೆ ಚಿಯರ್ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರವಿದೆ ಆದ್ರೆ ಮನೆಗೆ ಈ ರೀತಿ ಪೈಂಟ್ ಮಾಡಿಸಿರೋದು ಖುಷಿಕೊಟ್ಟಿದೆ. ನಮ್ಮ ಅಪ್ಪ ಅಮ್ಮ ಮನೆಯವರೆಲ್ಲರಿಗೂ ಕ್ರಿಕೆಟ್ ಇಷ್ಟ, ಹಾಗಾಗಿ ನಾನು ಈ ರೀತಿ ಪೈಂಟ್ ಮಾಡಿಸುತ್ತೇನೆ ಎಂದಾಗ ಎಲ್ಲಾರೂ ಖುಷಿಪಟ್ಟಿದ್ದಾರೆ. ಇನ್ನು ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಧೋನಿಯನ್ನು ಟೀಕಿಸುತ್ತಿರುವುದರಿಂದ ಇದರಿಂದಾಗಿ ಪಾಸಿಟಿವ್ ಸೃಷ್ಟಿಯಾಗಲಿದೆ ಅನ್ನೋ ನಂಬಿಕೆ ಹಾಗಾಗಿ ಪೈಂಟ್ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಧೋನಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಆದ್ರೆ ಅವರ ಸಾಧನೆಯನ್ನು ಮರೆತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಧೋನಿ ಚಿತ್ರ,ಸಿಎಸ್ಕೆ ಚಿತ್ರದ ಜೊತೆಯಲ್ಲಿ ಹಳದಿ ಬಣ್ಣ ಹೊಡೆಸಿರೋ ಗೋಪಿ ಮನೆಗೆ ಹೋಮ್ ಆಫ್ ಧೋನಿ ಫ್ಯಾನ್ ಎಂದು ಹೆಸರಿಟ್ಟಿದ್ದಾರೆ.
ಇನ್ನು ಈ ವಿಚಾರವಾಗಿ ಸಿಎಸ್ಕೆ ಟ್ವೀಟ್ ಮಾಡಿದ್ದು ಗೋಪಿಕೃಷ್ಣನ್ ಮತ್ತು ಅವರ ಕುಟುಂಬವು ತಮ್ಮ ನಿವಾಸವನ್ನು ಧೋನಿ ಫ್ಯಾನ್ನ ಮನೆ ಎಂದು ಹೆಸರಿಟ್ಟಿದ್ದಾರೆ. ಅವರಿಗೆ ಸೂಪರ್ ಡೂಪರ್ ಗೌರವ ಎಂದು ಬರೆದುಕೊಂಡಿದ್ದಾರೆ.