ದ್ರೋಣನಿಗೆ ಪವರ್ ಕೊಡಲು ಬಂದ ಅಪ್ಪು..!

ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ ದ್ರೋಣ ಚಿತ್ರದ ಈಗಾಗಲೆ ಶೂಟಿಂಗ್ ಮುಗಿಸಿ ರಿಲೀಸ್‍ಗೆ ರೆಡಿಯಾಗಿದ್ದು,ಸದ್ಯ ಚಿತ್ರದ ಆಡಿಯೋ ರಿಲೀಸ್ ಮಾಡೋ ಪ್ಲಾನ್ ಇದ್ದು,ಈಗ ಟ್ರೈಲರ್ ಜೊತೆಗೆ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದೇ 23ರಂದು ದ್ರೋಣ ಚಿತ್ರದ ಟ್ರೈಲರ್ ಮತ್ತು ಆಡಿಯೋ ಲಾಂಚ್ ಮಾಡಲಿದ್ದು, ಚಿತ್ರತಂಡಕ್ಕೆ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಸಾಥ್ ನೀಡಲಿದ್ದಾರೆ.

ಶಿವರಾಜ್‍ಕುಮಾರ್ ಅಭಿನಯದ ದ್ರೋಣ ಚಿತ್ರ ಟ್ರೈಲರ್ ಮತ್ತು ಆಡಿಯೋ ಇದೇ ಭಾನುವಾರ ಪುನೀತ್ ರಿಲೀಸ್ ಮಾಡಲಿದ್ದಾರೆ.ದ್ರೋಣದಲ್ಲಿ ಟೀಚರ್ ಪಾತ್ರದಲ್ಲಿಕಾಣಿಸಿಕೊಳ್ತಾ ಇರೋ ಶಿವಣ್ಣ ಕ್ಲಾಸ್ ಜೊತೆಯಲ್ಲಿ ಮಾಸ್ ಲುಕ್‍ನಲ್ಲೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top