ದೇಶಾದ್ಯಂತ ಸೆಪ್ಟಂಬರ್‌ ೨೫ ರಿಂದ ಮತ್ತೆ ಲಾಕ್‌ಡೌನ್‌ ಆಗುತ್ತಾ..!?

ಕೊರೋನಾ ವೈರಸ್‌ ಹಾವಳಿಯಿಂದ ದೇಶವೇ ಲಾಕ್‌ಡೌನ್‌ ಆಗಿ ಮತ್ತೆ ಹಂತ ಹಂತವಾಗಿ ಆನ್‌ಲಾಕ್‌ ಆಗಿದೆ. ಹೀಗಿರುವಾಗ ಸೆಪ್ಟಂಬರ್‌ 25 ರಿಂದ ಮತ್ತೆ ದೇಶಾದ್ಯಂತ ಲಾಕ್‌ಡೌನ್‌ ಆಗಲಿದೆ ಅನ್ನೋ ವಿಷಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಾ ಇದೆ.ಇನ್ನು ವಿಚಾರವಾಗಿ ಆದೇಶ ಪ್ರತಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ನಿಜವಾಗಿಯೂ ಸೆಪ್ಟಂಬರ್‌ 25ರಿಂದ ಮತ್ತೆ ಲಾಕ್‌ಡೌನ್‌ ಆಗುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಲು ಶುರುವಾಗಿದೆ. ಆದ್ರೆ ಇದರ ಬಗ್ಗೆ ಈಗ ಸತ್ಯಾಂಶ ಹೊರ ಬಿದ್ದಿದ್ದು, ಸ್ಯಾಷನಲ್‌ ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ಅಥಾರಿಟಿ ಹೆಸರಿನ ಲೆಟರ್‌ ಹೆಡ್‌ನಲ್ಲಿ ಸೆಪ್ಟಂಬರ್‌ ೨೫ರಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೆ ತರಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ ಈ ಬಗ್ಗೆ ರಿಯಾಲಿಟಿ ಚೆಕ್‌ ಮಾಡಿದ್ದಾರೆ. ಎನ್‌ಡಿಎಂಎ ಅಂಥದೊಂದು ಆದೇಶವನ್ನು ಪ್ರಕಟಿಸಿಲ್ಲ ,ಅದು ನಕಲಿ ಎಂದು ಸ್ಪಷ್ವಪಡಿಸಿದೆ . ಇದೊಂದು ಸುಳ್ಳು ಸುದ್ದಿ ಅನ್ನೋದನ್ನ ಸ್ಪಷ್ಟಪಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top