ದೇವೇಗೌಡರು ಇರೋವರೆಗು ಜೆಡಿಎಸ್‍ನಲ್ಲಿ ಇರ್ತೀನಿ-ವೈಎಸ್‍ವಿ ದತ್ತಾ..!

ದೇವೇಗೌಡರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಅಲ್ಲಿಯವರೆಗೆ ಮಾತ್ರ ಜೆಡಿಎಸ್‍ನಲ್ಲಿ ಇರುತ್ತೇನೆ ಎಂದು ವೈಎಸ್‍ವಿದತ್ತಾ ಹೇಳಿದ್ದಾರೆ. ಜೆಡಿಎಸ್‍ನಿಂದ ಮಾಜಿ ಶಾಸಕ ದತ್ತಾ ಹಿಂದೆ ಸರಿದಿದ್ದಾರೆ ಅನ್ನೋ ಮಾತಿಗೆ ಪ್ರತಿಕ್ರಿಯೆ ನೀಡಿರೋ ವೈಎಸ್‍ವಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್‍ನಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ನಾನು ಜೆಡಿಎಸ್‍ಗೆ ಬಂದಿದ್ದು ದೇವೇಗೌಡರನ್ನು ಮಾತ್ರ ನಂಬಿಕೊಂಡು , ಉಳಿದವರನ್ನು ನಾನು ನಂಬಿ ಬಂದಿಲ್ಲ, ಜೆಪಿ ಚಳುವಳಿಯಿಂದ ಪ್ರೇರಿತನಾಗಿ ಬಂದಿದ್ದೇನೆ. ಹಣ ಮಾಡು ಗುಣ ನನ್ನದಲ್ಲ ಎಂದು ಹೇಳಿದ್ದಾರೆ.

ಚುನಾವಣೆ ಸೋಲಿನ ಕಾರಣ ಪುನಃ ಬದುಕು ಕಟ್ಟಿಕೊಳ್ಳಲು ಹೊರಟಿದ್ದೇನೆ.ಪಕ್ಷದಲ್ಲಿ ಎರಡನೇ ಹಂತದ ನಾಯಕತ್ವದ ಕೊರತೆ ಇದೆ. ಸೈದ್ಧಾಂತಿಕ ಬದ್ಧತೆ ಇಲ್ಲದವರು ಪಕ್ಷದಲ್ಲಿ ಇದ್ದಾರೆ. ಹೆಸರಿಗಷ್ಟೇ ಜೆಡಿಎಸ್ ಪಕ್ಷ ಅಂತ ಹೇಳ್ತಾರೆ, ಹೊರಗಡೆ ಅಡ್ಜೆಸ್ಟ್‍ಮೆಂಟ್ ರಾಜಕೀಯ ಮಾಡುತ್ತಾರೆ. ಪಕ್ಷದಲ್ಲಿ ಹಲವರು ಅನ್ಯಮನಸ್ಕರಾಗಿದ್ದಾರೆ.ಅಂತಹವರನ್ನ ಒಟ್ಟುಗೂಡಿಸಿ ಸಕ್ರಿಯರಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top