ದೇವದತ್ ಪಡಿಕಲ್ ಟೀಂ ಇಂಡಿಯಾಗೆ ಆಡೋದು ಪಕ್ಕಾ

ದೇವದತ್ ಪಡಿಕಲ್ ಆರ್‍ಸಿಬಿ ಮತ್ತು ಐಪಿಎಲ್‍ನಲ್ಲಿ ಸದ್ಯ ಮಿಂಚುತ್ತಿರೋ ಎಡಗೈ ಬ್ಯಾಟ್ಸಮನ್, ಐಪಿಎಲ್ ಪಾದಾರ್ಪಣೆ ಪಂದ್ಯದಿಂದಲೇ ಎಲ್ಲರ ಗಮನ ಸೆಳೆದಿರೋ ಈ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನಗಳಿಸೋದು ಪಕ್ಕಾ ಅಂತಾನೇ ಹೇಳಲಾಗುತ್ತಿದೆ. ಈಗಾಲೇ ದೇವದತ್ ಪಡಿಕಲ್ ಆಟವನ್ನು ಯುವರಾಜ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಆಟಗಾರರು ಮೆಚ್ಚಿಕೊಂಡಿದ್ದು, ಇದೀಗ ದೇವದತ್ ಪಡಿಕಲ್ ಟೀಂ ಇಂಡಿಯಾದಲ್ಲಿ ಓಪನರ್ ಆಗಿ ಸ್ಥಾನ ಪಡೆಯುವುದು ಪಕ್ಕಾ ಅಂತ ಹೇಳಲಾಗುತ್ತಿದೆ.

ಹೌದು ಟೀಂ ಇಂಡಿಯಾದಲ್ಲಿ ಗಂಗೂಲಿ,ಗಂಭೀರ್ ನಂತರ ಓಪನರ್ ಎಡಗೈ ಬ್ಯಾಟ್ಸಮನ್‍ಗಳು ಅಷ್ಟಾಗಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ, ಇನ್ನು ಶಿಖರ್ ಧವನ್ ತಂಡದಲ್ಲಿ ಸ್ಥಾನ ಪಡೆದಿದ್ರು, ಇತ್ತಿಚಿನ ದಿನಗಳಲ್ಲಿ ಗಾಯದ ಸಮಸ್ಯೆ ಮತ್ತು ಫಾರ್ಮ್‍ನಲ್ಲಿ ಇರದೇ ಇರುವುದರಿಂದ ಟೀಂ ಇಂಡಿಯಾದಲ್ಲಿ ಓಪನರ್ ಎಡಗೈ ಬ್ಯಾಟ್ಸಮನ್ ಕೊರತೆ ಕಾಡುತ್ತಿದೆ. ಇದೀಗ ಐಪಿಎಲ್‍ನಲ್ಲಿ ಆರ್‍ಸಿಬಿ ಓಪನರ್ ಆಗಿ ಕಾಣಿಸಿಕೊಳ್ತಾ ಇರೋ ದೇವದತ್ ಪಡಿಕಲ್ ತಮ್ಮ ಉತ್ತಮ ಪ್ರದರ್ಶನ ನೀಡೋ ಮೂಲಕ ಟೀಂ ಇಂಡಿಯಾದಲ್ಲಿ ಭರವಸೆಯ ಟಾಪ್ ಆರ್ಡರ್‍ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾನೇ ಹೇಳಬಹುದು.

ಇನ್ನು ಈ ವಿಚಾರವಾಗಿ ಟೀಂ ಇಂಡಿಯಾದ ವೇಗದ ಬೌಲರ್ ದಾವಣಗೆರೆ ಎಕ್ಸ್‍ಪ್ರೆಸ್ ಕೂಡ ಮಾತನಾಡಿದ್ದು, ಸದ್ಯ ಶಿಖರ್ ಧವನ್ ಹೊರತು ಪಡಿಸಿದರೆ ಭಾರತದ ಟಾಪ್ ಆರ್ಡರ್‍ನಲ್ಲಿ ಭರವಸೆ ಮೂಡಿಸುವ ಎಡಗೈ ಡಾಂಡಿಗ ಇಲ್ಲ, ಇನ್ನು ಶಿಖರ್ ಧವನ್ ವಯಸ್ಸು 34 ವರ್ಷಗಳಾಗಿದ್ದು ಹೆಚ್ಚುದಿನ ಟೀಂಇಂಡಿಯಾದಲ್ಲಿ ಕಾಣಿಸಿಕೊಳ್ಳಲು ಕಷ್ಟವಾಗಬಹುದು, ಆದ್ದರಿಂದ ದೇವದತ್ ಪಡಿಕಲ್ ತನಗೆ ಸಿಗೋ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಐಪಿಎಲ್‍ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದ್ರೆ ಬ್ಲೂ ಜರ್ಸಿ ತೊಡಲು ಸುವರ್ಣಾವಕಾಶ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ದೇವದತ್ ಪಡಿಕಲ್ ಇದೇ ರೀತಿ ಐಪಿಎಲ್ ಉತ್ತಮ ಪ್ರದರ್ಶನ ನೀಡೋ ಮೂಲಕ ಬಿಸಿಸಿಐ ಗಮನ ಸೆಳೆಯೋ ಮೂಲಕ ಆದಷ್ಟು ಬೇಗ ಬ್ಲೂ ಜೆರ್ಸಿ ತೊಡುವಂತಾಗಲಿ ಅನ್ನೋದು ನಮ್ಮ ಆಶಯ.

ನಿಮ್ಮ ಪ್ರಕಾರ ದೇವದತ್ ಪಡಿಕಲ್ ಬ್ಲೂ ಜರ್ಸಿ ತೊಟ್ಟು , ಟೀಂ ಇಂಡಿಯಾದ ಪರ ಉತ್ತಮ ಎಡಗೈ ಓಪನರ್ ಆಗಲಿದ್ದಾರೆ. ನೀವೇನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top