ದೇವದತ್ ಪಡಿಕಲ್ ಆಟಕ್ಕೆ ಮನಸೋತ ವಿರಾಟ್ ಕೊಹ್ಲಿ

ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್‍ಸಿಬಿ ಪ್ಲೇ ಆಫ್ ಹಂತದಲ್ಲಿ ಸೋಲನ್ನು ಅನುಭವಿಸೋ ಮೂಲಕ ತನ್ನ ಐಪಿಎಲ್ ಈ ಅವೃತ್ತಿಯ ಮುಂದಿನ ಪಯಣಕ್ಕೆ ಗುಡ್‍ಬೈ ಹೇಳಿದ್ದು, ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಸದಸ್ಯರ ಜೊತೆ ಹೃದಯಸ್ಪರ್ಶಿ ಮಾತುಗಳನ್ನು ಆಡಿದ್ದಾರೆ. ಚೊಚ್ಚಲ ಟ್ರೋಫಿಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ತಂಡದಲ್ಲಿ ಇದ್ದ ಸಮಯದ ನೆನಪುಗಳು ಹಾಗೇ ಉಳಿದುಕೊಳ್ಳಲ್ಲಿವೆ.

ಎಲ್ಲರೂ ಒಟ್ಟಿಗೆ ಸಮಯ ಕಳೆದಿದ್ದೇವೆ, ಈ ಹಂತದ ವರೆಗೆ ನಾವು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕಳೆದ ಹಲವು ಅವೃತ್ತಿಯಲ್ಲಿ ನಾವು ಅಂತಹ ಉತ್ತಮ ಪ್ರದರ್ಶನವನ್ನು ನೀಡಿಲ್ಲ, ಇದೀಗ ನಾವು ಉತ್ತಮ ಹಾದಿಯಲ್ಲಿ ಸಾಗುತ್ತಿದ್ದೇವೆ ಅನ್ನೋ ನಂಬಿಕೆ ನನ್ನಲ್ಲಿ ಇದೆ.ಮುಂದಿನ ವರ್ಷದ ಐಪಿಎಲ್‍ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯ ಬೇಕಾಗುತ್ತದೆ.

ಅದಕ್ಕಾಗಿ ಈಗಿನಿಂದಲೇ ತಯಾರಿಯನ್ನು ಮಾಡುವ ಅಶ್ಯಕತೆ ಇದೆ, ಟೂರ್ನಿಯಲ್ಲಿ ಒಂದು ಕುಟುಂಬದ ರೀತಿ ಉಳಿದುಕೊಂಡಿದ್ದು ನಿಜಕ್ಕೂ ಅದ್ಭುತವಾಗಿತ್ತು ಅಂತ ಹೇಳಿದ ವಿರಾಟ್ ಕೊಹ್ಲಿ, ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ದೇವದತ್ ಪಡಿಕಲ್ ಮತ್ತು ಮೊಹಮ್ಮದ್ ಸಿರಾಜ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ರು, ದೇವದತ್ ಪಡಿಕಪ್ ತಮ್ಮ ಮೊದಲ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಜೊತೆ ಮೊಹಮ್ಮದ್ ಸಿರಾಜ್ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಇನ್ನು ಆರ್‍ಸಿಬಿ ಸೋಲಿನ ಬಳಿಗೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಹಲವರು ಪ್ರಶ್ನೆ ಮಾಡಿದ್ರು, ಇನ್ನು ಗೌತಂ ಗಂಭೀರ್ ವಿರಾಟ್ ಕೊಹ್ಲಿಯನ್ನು ಆರ್‍ಸಿಬಿ ನಾಯಕತ್ವದಿಂದ ಕೆಳಗಿಸಿ ಅಂತ ಹೇಳಿದ್ರು, ಇದೀಗ ವಿರಾಟ್ ಕೊಹ್ಲಿ ಪರವಾಗಿ ಆರ್‍ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಮತ್ತು ಮೈಕ್ ಹೆಸ್ಸನ್ ಮಾತನಾಡಿದ್ದು, ತಂಡದ ನಾಯಕನ ದೃಷ್ಟಿಕೋನದಲ್ಲಿ ಕೊಹ್ಲಿಯನ್ನು ನಾವು ಹೊಂದಿರೋದು ಅದೃಷ್ಟಶಾಲಿಗಳು.

ಅವರು ತಂಡದಲ್ಲಿ ಎಲ್ಲ ಆಟಗಾರರನ್ನು ಗೌರವಿಸುತ್ತಾರೆ. ಕೊಹ್ಲಿ ಸಾಕಷ್ಟು ಸಮಯವನ್ನು ತಂಡದ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ಅದರಲ್ಲೂ ಯುವ ಆಟಗಾರ ದೇವದತ್ ಪಡಿಕಲ್ ಜೊತೆಯಲ್ಲಿ ಸಾಕಷ್ಟು ಸಮಯ ಕಳೆದಿದ್ದು,ಪಡಿಕಲ್‍ಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ.ಬಹಳಷ್ಟು ಜನರು ದೂಷಿಸುತ್ತಾರೆ.

ನಾವು ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿದ್ದೇವೆ. ಇದರ ಫುಲ್ ಕ್ರೆಡಿಟ್ ಕೊಹ್ಲಿಗೆ ನೀಡಬೇಕು ಅಂತ ಹೇಳಿದ್ರೆ, ಇತ್ತ ಕೋಚ್ ಕ್ಯಾಟಿಚ್ ಮಾತನಾಡುತ್ತಾ ನಾವು ಈ ಅವೃತ್ತಿಯಲ್ಲಿ 11 ರಿಂದ 12 ವಾರಗಳ ಕಾಲ ಆಟಗಾರರ ಜೊತೆ ಕಾಲ ಕಳೆದಿದ್ದೇವೆ, ಹಾಗಾಗಿನಾವು ಅವರ ಚಿಂತನೆ ಬಗ್ಗೆ ಸಾಕಷ್ಟು ತಿಳಿದಿದ್ದೇವೆ. ಒಳ್ಳೆಯ ವಿಷಯಗಳನ್ನು ಅವರಲ್ಲಿರುವ ಸಾಕಷ್ಟು ಮಾಹಿತಿಗಳನ್ನು ನಾವು ತಿಳಿದುಕೊಂಡಿದ್ದೇವೆ. ಈ ಆವೃತ್ತಿಯ ಬಗ್ಗೆ ಎಲ್ಲವನ್ನು ಪರಾಮರ್ಶೆ ನಡೆಸಿ ಮುಂದಿನ ಸೀಸನ್ ಬಗ್ಗೆ ನಂತರ ಚಿಂತನೆ ನಡೆಸುತ್ತೇವೆ ಅಂತ ಹೇಳಿದ್ದಾರೆ.

ಈ ವಿಚಾರವಾಗಿ ನಿಮ್ಮ ಅನಿಸಿಕೆ ಏನು ವಿರಾಟ್‍ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top