ದೇವದತ್‌ ಪಡಿಕಲ್‌ ಮಾತಿಗೆ ಕಾಪಿಪೇಸ್ಟ್‌ ಅಂದ ಚಹಲ್‌..

ನಿನ್ನೆ ನಡೆದ ಆರ್‌ಸಿಬಿ,ಹೈದರಬಾದ್‌ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿತ್ತು, ಇನ್ನು ಐಪಿಎಲ್‌ನ ಪಾದಾರ್ಪಣೆ ಪಂದ್ಯದಲ್ಲಿ ಅಧಶತಕ ಸಿಡಿಸುವ ಮೂಲಕ ದಾಖಲೆ ಬರೆದ ದೇವದತ್‌ ಪಡಿಕಲ್‌ ನಿನ್ನೆಯ ಮ್ಯಾಚ್‌ ಹೀರೋ ಆಗಿ ಹೊರಹೊಮ್ಮಿದ್ರು, ಈ ನಡುವೆ ಪಂದ್ಯ ಮುಗಿದ ನಂತರ ಲೈವ್‌ ಶೋ ಮಾತಿಗೆ ಇಳಿದ ದೇವದತ್‌ ಪಡಿಕಲ್‌ ಕನ್ನಡದಲ್ಲಿ ಆರ್‌ಸಿಬಿ ಆಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಿದ್ರು,ಎಲ್ಲರೂ ಆರ್‌ಸಿಬಿ ಸಪೋರ್ಟ್‌ ಮಾಡ್ತಾ ಇರಿ..ತುಂಬಾ ಚೆನ್ನಾಗಿತ್ತು ಫಸ್ಟ್‌ ಮ್ಯಾಚ್‌ ಹೀಗೆ ಆಡ್ತಾ ಇರಬಹುದು ನೀವ್‌ ಸಪೋರ್ಟ್‌ ಮಾಡ್ತಾ ಇರಿ ಅಂತ ಕನ್ನಡದಲ್ಲಿ ಮಾತನಾಡಿದ ದೇವ್‌ದತ್‌ ಪಡಿಕಲ್‌ ನಂತರ ಯಜುವೇಂದ್ರ ಜಹಲ್‌ ನಂದು ಕಾಪಿ ಪೇಸ್ಟ್‌ ಅನ್ನೋ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಿದ್ರು.

ಪಡಿಕಲ್ ನ ಕನ್ನಡದ ಮಾತು.ದೂರದ ದುಬೈನಲ್ಲಿ ಕನ್ನಡದ ಕಂಪು.💕

Posted by ವಿನಯ್ ವಿನು on Monday, September 21, 2020
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top