ದೇವದತ್‌ ಪಡಿಕಲ್‌ ಟೀಂ ಇಂಡಿಯಾದ ಭವಿಷ್ಯ ಅಂದ ಆರ್‌ಸಿಬಿ ಆಟಗಾರ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಈ ಬಾರಿಯ ಐಪಿಎಲ್‌ ಕಪ್‌ ಗೆಲ್ಲುವ ವಿಶ್ವಾದಲ್ಲಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಹಾಟ್‌ ಫೇವರಿಟ್‌ ಅಂದ್ರೆ ಅದು ಕನ್ನಡಿಗ ದೇವದತ್‌ ಪಡಿಕಲ್‌. ಐಪಿಎಲ್‌ ಪಾದಾರ್ಪಣೆ ಪಂದ್ಯದಲ್ಲಿ ಅರ್ಧ ಶತಕ ಸಿಡಿಸೋ ಮೂಲಕ ಎಲ್ಲರ ಗಮನ ಸೆಳೆದ ಪಡಿಕಲ್‌, ಆರ್‌ಸಿಬಿ ಪರ ಎರಡನೇ ಅತಿ ಹೆಚ್ಚು ರನ್‌ ಹೊಡೆದ ಆಟಗಾರನಾಗಿದ್ದಾರೆ. ಇನ್ನು ಈಗಾಗಲೇ ಪಡಿಕಲ್‌ ಆಟಕ್ಕೆ ಅನೇಕ ಕ್ರಿಕೆಟ್‌ ದಿಗ್ಗಜರು ಮನಸೋತಿದ್ದು, ಪಡಿಕಲ್‌ ಭವಿಷ್ಯದ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಅಂತಾನೇ ಹೇಳ್ತಾ ಇದ್ದಾರೆ.

ಇನ್ನು ದೇವದತ್‌ ಪಡಿಕಲ್‌ ಆಟ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌ ಆಟವನ್ನು ನೆನಪಿಸುತ್ತದೆ ಅನ್ನೋ ಮಾತುಗಳನ್ನು ಸಹ ಕೆಲವ್ರು ಹೇಳಿದ್ದಾರೆ. ಇದೀಗ ದೇವದತ್‌ ಪಡಿಕಲ್‌ ಟೀಂ ಇಂಡಿಯಾದ ಭವಿಷ್ಯ ಅನ್ನೋ ಮಾತುಗಳನ್ನು ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ಹೇಳಿದ್ದಾರೆ. ಹೌದು ಆರ್‌ಸಿಬಿಯ ಆಲ್‌ರೌಂಡರ್‌ ಆಟಗಾರ ಕ್ರಿಸ್‌ ಮೊರಿಸ್‌ ದೇವದತ್‌ ಪಡಿಕಲ್‌ ಆಟವನ್ನು ಹೊಗಳಿದ್ದು, ದೇವದತ್‌ ಪಡಿಕಲ್‌ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌ ಅವರ ಹೋಲಿಕೆಯನ್ನು ಹೊಂದಿದ್ದಾರೆ ಎಂದು ಕ್ರಿಸ್‌ ಮಾರಿಸ್‌ ದೇವದತ್‌ ಆಟವನ್ನು ಹೊಗಳಿದ್ದಾರೆ.

ದೇವದತ್‌ ಪಡಿಕಲ್‌ ಒಬ್ಬ ಅದ್ಭುತ ಬ್ಯಾಟ್ಸಮನ್‌ ಆಗಿದ್ದಾನೆ. ಹೇಡನ್‌ ರೀತಿ ಬ್ಯಾಟಿಂಗ್‌ ಮಾಡುವ ಮಾರ್ಗವನ್ನು ಹೊಂದಿದ್ದಾರೆ. ಅವರ ದೇಹದ ಗಾತ್ರವನ್ನು ಹೊಂದಿಲ್ಲ , ಆದ್ರೆ ಅವರು ಶಾಟ್‌ ಹೊಡೆಯುವ ತಂತ್ರವನ್ನು ಪಡಿಕಲ್‌ ಹೊಂದಿದ್ದಾರೆ. ಅವರು ಶ್ರೇಷ್ಠ ಕ್ರಿಕೆಟ್‌ ಪಡು ಆಗಲಿದ್ದಾರೆ. ಅವರು ಭಾರತೀರಯ ಕ್ರಿಕೆಟ್‌ ಭವಿಷ್ಯ ಎಂದು ಕ್ರಿಸ್‌ ಮೋರಿಸ್‌ ಹೇಳಿದ್ದಾರೆ.
ಇನ್ನು ಇದೇ ವೇಳೆ ಶೈನಿ ಮತ್ತು ವಾಷಿಂಗ್‌ ಟನ್‌ ಸುಂದರ್‌ ವಿಚಾರವಾಗಿಯೂ ಹೋಗಳಿದ್ದಾರೆ.

ನಿಮ್ಮ ಪ್ರಕಾರ ಮೋರಿಸ್‌ ಹೇಳಿದ ರೀತಿ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್‌ ಪ್ಲೇಯರ್‌ ಆಗಲಿದ್ದಾರ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top