ದೇವದತ್‌ ಪಡಿಕಲ್‌ ಆಟ ಯುವರಾಜ್‌ ಸಿಂಗ್‌ ನೆನಪಿಸುತ್ತೆ ಅಂದ ಆ ಆಟಗಾರ

ಐಪಿಎಲ್‌ 2020ಯಲ್ಲಿ ಸದ್ಯ ಎಲ್ಲರ ಕಣ್ಣು ಆರ್‌ಸಿಬಿ ತಂಡದ ಆಟಗಾರ ಕನ್ನಡಿಗ ದೇವದತ್‌ ಪಡಿಕಲ್‌ ಮೇಲೆ ಇದೆ. ಸದ್ಯ ದೇವದತ್‌ ಐಪಿಎಲ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಅರ್ಧ ಶತಕವನ್ನು ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈಗಾಗಲೇ ದೇವದತ್‌ ಆಟಕ್ಕೆ ಕ್ರಿಕೆಟ್‌ ಪ್ರಿಯರು ಮನಸೋತಿದ್ದಾರೆ. ಇದೀಗ ದೇವದತ್‌ ಆಟವನ್ನು ಯುವರಾಜ್‌ ಸಿಂಗ್‌ ಹೋಲಿಸಿದ್ದಾರೆ ಟೀಂ ಇಂಡಿಯಾದ ಈ ಆಟಗಾರ, ಹೌದು ಟೀಂ ಇಂಡಿಯಾದಲ್ಲಿ ವೇಗದ ಬೌಲರ್‌ ಆಗಿ ಗುರುತಿಸಿಕೊಂಡಿದ್ದ ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್‌ ಕುಮಾರ್‌ ಇದೀಗ ದೇವದತ್‌ ಪಡಿಕಲ್‌ ಬಗ್ಗೆ ಮಾತನಾಡಿದ್ದು, ದೇವದತ್‌ ಪಡಿಕಲ್‌ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸುವ ಆಟಗಾರ ಎಂದು ಹೇಳಿದ್ದು, ಆತನ ಆಟವನ್ನು ನೋಡ್ತಾ ಇದ್ರೆ ನನಗೆ ಯುವರಾಜ್‌ ಸಿಂಗ್‌ ಆಟ ನೆನಪಿಗೆ ಬರುತ್ತೆ ಅಂತ ಹೇಳಿದ್ದಾರೆ.

ಇನ್ನು ಇತ್ತಿಚೆಗೆ ಯುವರಾಜ್‌ ಸಿಂಗ್‌ ಕೂಡ ದೇವದತ್‌ ಪಡಿಕಲ್‌ ಆಟವನ್ನು ನೋಡಿ ಅವರ ಜೊತೆ ಸ್ಪರ್ಧೆಗೆ ಇಳಿಯಬೇಕು.ಮೈದಾನದಲ್ಲಿ ಯಾರು ಎತ್ತರಕ್ಕೆ ಸಿಕ್ಸ್‌ ಬಾರಿಸುತ್ತಾರೆ ನೋಡ ಬೇಕು ಎಂದು ಹೇಳಿದ್ರು, ಇನ್ನು ದೇವದತ್‌ ಕೂಡ ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ, ಬದಲಿಗೆ ನಿಮ್ಮ ಜೊತೆ ಆಡುವ ಆಸೆ ಇದೆ ಎಂದು ದೇವದತ್‌ ಪಡಿಕಲ್‌ ಕೂಡ ಹೇಳಿಕೊಂಡಿದ್ರು. ಸದ್ಯ ದೇವದತ್‌ ಆಟವನ್ನು ನೋಡುತ್ತಿರೊ ಕ್ರಿಕೆಟ್‌ ಪಂಡಿತರು ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಗೆ ಒಬ್ಬ ಭರವಸೆಯ ಓಪನರ್‌ ಸಿಕ್ಕಿ ಆಯ್ತು ಅಂತ ಹೇಳುತ್ತಿದ್ದಾರೆ. ಈ ವಿಚಾರವಾಗಿ ನೀವ್‌ ಏನ್‌ ಹೇಳ್ತೀರಾ ದೇವದತ್‌ ಪಡಿಕಲ್‌ ಟೀಂ ಇಂಡಿಯಾದಲ್ಲಿ ಓಪನರ್‌ ಆಗಿ ಕಾಣಿಸಿಕೊಳ್ತಾರ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top