ಐಪಿಎಲ್ನಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನದಿಂದಾಗಿ ಗೆಲುವಿನ ಲಯದಲ್ಲಿದೆ, ಆದ್ರೆ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಆರ್ಸಿಬಿ ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕದಲ್ಲಿತ್ತು, ಆದ್ರೆ ಡೆಲ್ಲಿ ನೀಡಿದ್ದ 196ರನ್ಗಳ ಗುರಿ ಮುಟ್ಟುವನ್ನಲಿ ಯಡವಿದ ಆರ್ಸಿಬಿ ತಂಡಕ್ಕೆ ಸದ್ಯ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ, ಆದ್ರೆ ಆರ್ಸಿಬಿ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಸೋತ ನಂತರ ಇದಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುಮಾಡಿದ್ದಾರೆ.
ಹೌದು ಐಪಿಎಲ್ 2020ಯಲ್ಲಿ ಆರ್ಸಿಬಿ ಮ್ಯಾಚ್ ಸೋಲಲು ಪ್ರಮುಖ ಕಾರಣವನ್ನು ಹುಡುಕಿರೋ ಕೆಲವ್ರು, ಐಪಿಎಲ್ನಲ್ಲಿ 20ಲಕ್ಷಕ್ಕೆ ಆರ್ಸಿಬಿ ಪಾಲಾಗಿರೋ ದೇವದತ್ ಪಡಿಕಲ್ ಈ ಬಾರಿ ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ, ಇನ್ನು ಮೊದಲ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದು, ಆನಂತರ ಆಡಿದ 4 ಪಂದ್ಯದಲ್ಲಿ 3 ಅರ್ಧ ಶತಕ ಸಿಡಿಸಿದ ಆಟಗಾರರ ಅನ್ನೋ ದಾಖಲೆಯನ್ನು ಬರೆದ್ರು, ಆದ್ರೆ ಇದೀಗ ದೇವದತ್ ಪಡಿಕಲ್ ಆರ್ಸಿಬಿ ಪರ ಉತ್ತಮ ಆಟವಾಡಿದ್ರೆ ಮಾತ್ರ ತಂಡ ಗೆಲ್ಲಲು ಸಾಧ್ಯ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಅದಕ್ಕೆ ಸಾಕ್ಷಿಯೆಂಬಂತೆ ಆರ್ಸಿಬಿ ಆಡಿದ ಪಂದ್ಯದ ರಿಸಲ್ಟ್ ಕೂಡ ಹಾಗೇ ಆಗಿದೆ. ದೇವದತ್ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಭರ್ಜರಿ 56 ರನ್ ಗಳಿಸಿದ್ದು ಆ ಪಂದ್ಯದಲ್ಲಿ ಆರ್ಸಿಬಿ ಜಯಸಾಧಿಸಿತ್ತು, ಇನ್ನು ಪಂಜಾಬ್ ವಿರುದ್ಧ ಪಡಿಕಲ್ ಗಳಿಸಿದ್ದು ಕೇವಲ 1 ರನ್ ಆ ಪಂದ್ಯದಲ್ಲಿ ಆರ್ಸಿಬಿ 97ರನ್ಗಳ ಸೋಲನ್ನು ಕಂಡಿತ್ತು, ಆ ನಂತರ ನಡೆದ ಮುಂಬೈ ವಿರುದ್ಧ ಪಂದ್ಯದಲ್ಲಿ 54 ರನ್ ಸಿಡಿಸಿದ್ದ ದೇವದತ್ ಆ ಪಂದ್ಯದಲ್ಲಿ ಆರ್ಸಿಬಿ ಸೂಪರ್ ಓವರ್ನಲ್ಲಿ ಜಯಭೇರಿ ಬಾರಿಸಿತು, ಇನ್ನು ರಾಜಸ್ತಾನ್ ರಾಯಲ್ಸ್ ವಿರುದ್ಧ 65 ರನ್ ಸಿಡಿಸುವ ಮೂಲಕ ೮ ವಿಕೆಟ್ಗಳ ಜಯಕ್ಕೆ ಪಡಿಕಲ್ ಕಾರಣ ಕರ್ತರಾಗಿದ್ದರು, ಆದ್ರೆ ನಿನ್ನೆ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ದೇವದತ್ ಪಡಿಕಲ್ 4 ರನ್ಗೆ ಔಟ್ ಆಗಿದ್ದು, ಇಲ್ಲೂ ಸಹ ಆರ್ಸಿಬಿ 60 ರನ್ಗಳ ಸೋಲನ್ನು ಕಂಡಿತು.
ಹೀಗಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ತಂಡದಲ್ಲಿ ದೇವದತ್ ಪಡಿಕಲ್ ಆಟವಾಡಿದ್ರೆ ಮಾತ್ರ ಆರ್ಸಿಬಿ ಗೆಲ್ಲುತ್ತದೆ ಇಲ್ಲವಾದ್ರೆ ತಂಡ ಸೋಲುತ್ತೆ ಹಾಗಾಗಿ ಪಡಿಕಲ್ ಬೇಗನೇ ಔಟಾದ್ರೆ ಆರ್ಸಿಬಿ ಸೋತಂತೆ ಅನ್ನೋ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ವಿಚಾರವಾಗಿ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.