ದೀಪಿಕಾ ಪಡುಕೋಣೆ ಡ್ರಗ್ಸ್ ವಾಟ್ಸಪ್ ಗ್ರೂಪ್‍ಗೆ ಅಡ್ಮಿನ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆಗೆ ನೋಟಿಸ್ ನೀಡಿದ್ದು, ಇದೀಗ ಮತ್ತೊಂದು ಸ್ಫೋಟಕ ಮಾಹಿತಿಯೊಂದು ಹೊರ ಬಂದಿದ್ದು, ಡ್ರಗ್ಸ್ ವಾಟ್ಸಾಪ್ ಗ್ರೂಪ್‍ಗೆ ದೀಪಿಕಾ ಪಡುಕೋಣೆ ಅಡ್ಮಿನ್ ಆಗಿದ್ದರು ಎಂಬ ಮಾಹಿತಿ ಇದೀಗ ಹೊರ ಬಂದಿದೆ.

ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವಾಗಲೇ ಡ್ರಗ್ಸ್ ದಂಧೆ ಕುರಿತು ವಿಷಯ ಹೊರಬರುತ್ತಿದ್ದು, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಇತರ ಡ್ರಗ್ ಪೆಡ್ಲರ್‍ಗಳನ್ನು ವಿಚಾರಣೆ ನಡೆಸಿದ್ದು, ಬಾಲಿವುಡ್‍ನ ಅನೇಕ ನಟ,ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಹೊರ ಬೀಳುತ್ತಿದೆ.ಈಗಾಗಲೇ ಎನ್‍ಸಿಬಿ ಕೂಡ ಹಲವು ನಟಿಯರ ವಿಚಾರಣೆಯನ್ನು ಸಹ ನಡೆಸಿದೆ.

ಈ ಹಿಂದೆ ದೀಪಿಕಾ ಮ್ಯಾನೇಜರ್‍ನ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು, ಇದೀಗ ದೀಪಿಕಾಗೂ ನೋಟಿಸ್ ನೀಡಿದ್ದು, ಶನಿವಾರ ದೀಪಿಕಾ ವಿಚಾರಣೆಗೆ ಹಾಜರಾಗಲಿದ್ದಾರೆ. ಇದರ ನಡುವೆ ಇದೀಗ ಡ್ರಗ್ಸ್ ವಾಟ್ಸಾಪ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ ಆಗಿದ್ದರು ಅನ್ನೋ ಮಾಹಿತಿ ಹೊರ ಬಿದ್ದಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top