ದೀಪಾವಳಿಗೆ ಪಟಾಕಿ ನಿಷೇಧಿಸಿದ ರಾಜ್ಯ ಸರ್ಕಾರ

ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಬಿಎಸ್‌ವೈ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಹಾವಳಿ ಇನ್ನು ಕಮ್ಮಿಯಾಗದ ಹಿನ್ನೆಲೆ ಕೊರೊನಾ ರೋಗಿಗಳಿಗೆ ಪಟಾಕಿ ಸಿಡಿಸುವುದರಿಂದ ತೊಂಡದರೆಯಾಗುತ್ತದೆ. ಸೋಂಕಿತ ಪ್ರಮಾಣ ಅಧಿಕವಾಗುತ್ತದೆ ಎಂಬ ತಜ್ಞರ ನೀಡಿರೋ ವರದಿ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ್ದು, ಈಗಾಗಲೇ ದೆಹಲಿ, ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ಸಿಡಿಸೋದು ನಿಷೇಧಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ಕೂಡ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸೋದನ್ನು ನಿಷೇಧಿಸಿದ್ದು ಶ್ರೀಘ್ರದಲ್ಲೇ ನೋಟಿಫಿಕೇಶನ್‌ ಹೊರಡಿಸುವುದಾಗಿ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top