`ದಿಸ್‌ ಪ್ರಾಪರ್ಟಿ ಬಿಲಾಂಗ್ಸ್‌ ಟು’ ಅಂತ ರಚಿತಾ ಯಾರಿಗ್‌ ಹೇಳಿದ್ದು..!

ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಸದ್ಯ ಸ್ಯಾಂಡಲ್‌ವುಡ್‌ ಬ್ಯೂಸಿ ನಟಿ. ಆದ್ರೆ ಹೀಗಿರುವಾಗಲೇ ರಚಿತಾ ರಾಮ್‌ ಟಾಲಿವುಡ್‌ಗೆ ಹಾರಿದ್ದಾರೆ. ತೆಲುಗಿನ ಕಲ್ಯಾಣ್‌ ದೇವ್‌ ನಾಯಕನಾಗಿ ನಟಸುತ್ತಿರೋ ಸೂಪರ್‌ ಮಚ್ಚಿ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಲಿ ವಾಸು ನಿರ್ದೇಶನದಲ್ಲಿ ಮೂಡಿ ಬರ್ತಾ ಇರೋ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಈ ನಡುವೆ ರಚಿತಾ ರಾಮ್‌ ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ್ದಾರೆ. ತೆಲುಗಿನಲ್ಲಿ ಅಭಿನಯಿಸುತ್ತಿರೋ ಸೂಪರ್‌ ಮಚ್ಚಿ ಸಿನಿಮಾ ಕನ್ನಡದಲ್ಲೂ ತೆರೆಕಾಣಲಿದಯಂತೆ. ಇನ್ನು ಕನ್ನಡದಲ್ಲಿ `ದಿಸ್‌ ಪ್ರಾಪರ್ಟಿ ಬಿಲಾಂಗ್ಸ್‌ಟುʼ ಅನ್ನೋ ಟೈಟಲ್‌ನಲ್ಲಿ ತೆರೆಕಾಣಲಿದೆಯಂತೆ, ಇನ್ನು ಚಿತ್ರತಂಡ ಸದ್ಯ ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಎರಡನೇ ಹಂತದ ಶೂಟಿಂಗ್‌ ನಡೆಸಲಿದಯಂತೆ.

ಇನ್ನು ಈ ಚಿತ್ರದಲ್ಲಿ ರಚಿತಾ ರಾಮ್‌ ಜೊತೆಯಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ. ಸೇರಿದಂತೆ ಅನೇಕ ಕಲಾವಿದರು ಸಹ ನಟಿಸುತ್ತಿದ್ದು. ಇತ್ತೀಚೆಗೆ ಕಲ್ಯಾಣ್‌ ದೇವ್‌ ಜೊತೆ ರಚಿತಾ ಹೋಳಿ ಆಡಿರೋ ಫೋಟೋಗಳು ಸಖತ್‌ ವೈರಲ್‌ ಕೂಡ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top