ದಾಖಲೆ ಮೇಲೆ ದಾಖಲೆ ಬರೆದ ಪಡಿಕಲ್ ಮತ್ತೆ ಆಪತ್ಭಾಂಧವ ಆದ ಎಬಿಡಿ

ಐಪಿಎಲ್ 2020ಯ ಆರ್‍ಸಿಬಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು ತಂಡಕ್ಕೆ ದೇವದತ್ ಪಡಿಕಲ್ ಉತ್ತಮವಾದ ಓಪನಿಂಗ್ ತಂದುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಮತ್ತೊಂದು ಹೊಸ ದಾಖಲೆಯನ್ನು ಬರೆದಿದ್ದಾರೆ. ಹೌದು ಪಾದಾರ್ಪಣೆ ಪಂದ್ಯದಲ್ಲಿ ಅರ್ಥ ಶತಕ ಸಿಡಿಸೋ ಮೂಲಕ ಹೊಸ ದಾಖಲೆ ಬರೆದಿದ್ದ ಪಡಿಕಲ್ ನಂತರ ಸತತ ಮೂರು ಅರ್ಥ ಶತಕಗಳನ್ನು ಸಿಡಿಸಿ ಮತ್ತೊಂದು ದಾಖಲೆ ಬರೆದಿದ್ರು, ಇದೀಗ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಹೌದು ಪಡಿಕಲ್ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಟವಾಡದೇ ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಎರಡನೇ ಆಟಗಾರ ಅನ್ನೋ ದಾಖಲೆಯನ್ನು ಬರೆದಿದ್ದಾರೆ. ಮೊದಲ ಸ್ಥಾನದಲ್ಲಿ ಶಾನ್ ಮಾರ್ಷ ಇದ್ದು, ಎರಡನೇ ಸ್ಥಾನದಲ್ಲಿ ದೇವದತ್ ಪಡಿಕಲ್ ಇದ್ದು ಆ ಮೂಲಕ ದೇವದತ್ ಪಡಿಕಲ್ ಮತ್ತೊಂದು ಹೊಸ ದಾಖಲೆಯನ್ನು ಬರೆದಿದ್ದಾರೆ. ಮೊದಲ ಐಪಿಎಲ್‍ನಲ್ಲೇ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಟೀಂ ಇಂಡಿಯಾದ ಮುಂದಿನ ಭವಿಷ್ಯದ ಸ್ಟಾರ್ ಆಟಗಾರ ಅನ್ನೋದನ್ನ ಪದೇ ಪದೇ ಪ್ರ್ಯೂವ್ ಮಾಡ್ತಾನೇ ಇದ್ದಾರೆ.ಇಂದಿನ ಪಂದ್ಯದಲ್ಲಿ ದೇವದತ್ ಪಡಿಕಲ್ ಅಮೋಘ ಅರ್ಥ ಶತಕ ಸಿಡಿಸೋ ಮೂಲಕ ಈ ಐಪಿಎಲ್‍ನಲ್ಲಿ 5ನೇ ಅರ್ಥ ಶತಕ ಸಿಡಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ಸಾಥ್ ನೀಡಿದ್ರು, ಇನ್ನು ಈ ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೂರನೇ ಆಟಗಾರ ಅನ್ನೋ ದಾಖಲೆಯನ್ನು ಸದ್ಯ ಪಡಿಕಲ್ ಬರೆದಿದ್ದಾರೆ.

ಪಡಿಕಲ್ ಅವರ ಉತ್ತಮ ಓಪನಿಂಗ್ ಇದ್ರು, ಆರ್‍ಸಿಬಿಯ ನಾಯಕ ಕೊಹ್ಲಿ ಮತ್ತು ಉಳಿದ ಆಟಗಾರರ ಉತ್ತಮ ಆಟ ತೋರದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ, ಇನ್ನ ಆರ್‍ಸಿಬಿ ಆಪತ್ಭಾಂದವ ಎಬಿಡಿಯ ಉತ್ತಮ ಆಟದಿಂದಾಗಿ ಇವರಿಗೆ ಸಾಥ್ ನೀಡಿದ್ದು ಶಿವಂ ದುಬೆ..ಇವರಿಬ್ಬರ ಕೊನೆಯ ಉತ್ತಮ ಜೊತೆಯಾಟಕ್ಕೆ ಆರ್‍ಸಿಬಿ 20 ಓವರ್‍ನಲ್ಲಿ 152ರನ್‍ಗಳನ್ನು ಪೇರಿಸಿದ್ದು ಡೆಲ್ಲಿಗೆ 153ರನ್‍ಗಳ ಟಾರ್ಗೆಟ್ ನೀಡಿದ್ರು.

ಇವತ್ತಿನ ಪಂದ್ಯದಲ್ಲಿ ಆರ್‍ಸಿಬಿ ಆಟದ ಬಗ್ಗೆ ನೀವ್ ಏನ್ ಹೇಳ್ತೀರಾ. ಎಬಿಡಿ ಅಪತ್ಭಾಂಧವ ಆಗಿದ್ದರ ಬಗ್ಗೆ ಮತ್ತು ಪಡಿಕಲ್ ದಾಖಲೆ ಬಗ್ಗೆ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top