ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಎ.ಪಿ ಅರ್ಜುನ್.!

ಲಾಕ್ ಡೌನ್ ಹಿನ್ನೆಲೆ ಅನೇಕ‌ ಸಭೆ ಸಮಾರಂಭಗಳು ಸರಳವಾಗಿ ನಡೆಯುತ್ತಿವೆ, ಇನ್ನು ಕೆಲವು ಸೆಲೆಬ್ರಿಟಿಗಳ ವಿವಾಹವೂ ಸಹ ಸರಳವಾಗಿ ನಡೀತಾ ಇದ್ದು, ಇಂದು ಖ್ಯಾತ‌ ನಿರ್ದೇಶಕ ಎ.ಪಿ.ಅರ್ಜುನ್ ಸರಳವಾಗಿ ವಿವಾಹವಾಗಿದ್ದಾರೆ.

ಇಂದು ರಾಮಸಂದ್ರದ ಮಹಾಲಕ್ಷ್ಮಿ ಎನ್ ಕ್ಲೇವ್ ನಲ್ಲಿ ಸರಳವಾಗಿ ಹಾಸನ ಮೂಲದ ಹುಡುಗಿ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಯಾರು ಭಾಗವಹಿಸಿರಲಿಲ್ಲ,

ಇನ್ನು ವಿವಾಹಕ್ಕೆ ಆಪ್ತರು ಮತ್ತು ಧ್ರುವಾ ಸರ್ಜಾ ಮತ್ತು ಕಿಸ್ ಚಿತ್ರದ ನಾಯಕ ವಿರಾಟ್ ಭಾಗವಹಿಸಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top