ದರ್ಶನ್ ರ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಕೀರ್ತಿ ಸುರೇಶ್,ಪೂಜಾ ಹೆಗಡೆ ನಾಯಕಿ..!

ಸ್ಯಾಂಡಲ್ವುಡ್ ನ ಬಿಗ್ ಬಜೆಟ್ ಸಿನಿಮಾ ಗಂಡುಗಲಿ ಮದಕರಿ ನಾಯಕ ಚಿತ್ರ ಇಂದು ಚಿತ್ರದುರ್ಗದಲ್ಲಿ ಮುಹೂರ್ತ ಕಾರ್ಯಕ್ರಮ ನೆರೆವೇರಿಸಿದ್ದು, ಇಂದು ಚಿತ್ರದುರ್ಗದಲ್ಲಿ‌ ಮದಕರಿ‌ನಾಯಕನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಲಾಯ್ತು,

ದರ್ಶನ್ ಅಭಿನಯದ ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದು ಚಿತ್ರದ ಬಗ್ಗೆ ಈಗಾಗ್ಲೇ ಬಹಳ‌ ನಿರೀಕ್ಷೆಗಳು ಹುಟ್ಟಿಕೊಂಡಿದೆ,ಇನ್ನು ಈ ಚಿತ್ರಕ್ಕೆ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಈಗ ಚಿತ್ರತಂಡದಿಂದ ಹೊಸ ವಿಷಯ ಹೊರಬಿದ್ದಿದ್ದು ಗಂಡುಗಲಿ ಮದಕರಿ ನಾಯಕ‌ ಚಿತ್ರದಲ್ಲಿ ದರ್ಶನ್ ಜೊತೆ ಬಹುಭಾಷಾ ನಟಿ ಕೀರ್ತಿ‌ ಸುರೇಶ್ ಮತ್ತು ತೆಲುಗಿನ ಬ್ಯೂಸಿ‌ ನಟಿ ಪೂಜಾ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ‌ ಮಾತು ಈಗ ಚಿತ್ರತಂಡದಿಂದ ಹೊರ ಬಿದ್ದಿದೆ.

ಇನ್ನು ಚಿತ್ರದಲ್ಲಿ‌ ದೊಡ್ಡ ದೊಡ್ಡ ಸ್ಟಾರ್ ನಟರು‌ ನಟಿಸಲಿದ್ದು ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top