
ಚಾಲೆಂಜಿಂಗ್ ಸ್ಟಾರ್ ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಏನ್ ಹೇಳಿದ್ರು ಅವರ ಅಭಿಮಾನಿಗಳು ಚಾಚುತಪ್ಪದೇ ಮಾಡುತ್ತಾರೆ.. ಇನ್ನು ಅಭಿಮಾನಿಗಳು ಸಹ ಡಿ ಬಾಸ್ ಅಜ್ಞೆಗಾಗಿ ಕಾಯ್ತಾ ಇರ್ತಾರೆ..ಇನ್ನು ಡಿ ಬಾಸ್ ಅವರ ಸಿನಿಮಾ ವಿಡಿಯೋಗಳು ಅಥವಾ ಅವರ ಮಾತಿನ ವಿಡಿಯೋಗಳು ಆಗಾಗೇ ವೈರಲ್ ಕೂಡ ಆಗ್ತಾ ಇರ್ತಾವೆ, ಅದೇ ರೀತಿ ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಎರಡು ವರ್ಷಗಳ ಹಿಂದಿನದ್ದು, ಹೌದು ಡಿ ಬಾಸ್ ದರ್ಶನ್ 2018ರಲ್ಲಿ ಮಾತನಾಡಿರೋ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಹೌದು 2018ರಲ್ಲಿ ಐಪಿಎಲ್ ವೇಳೆಯಲ್ಲಿ ಡಿ ಬಾಸ್ ಐಪಿಎಲ್ ಅನ್ನು ಒಂದು ಮ್ಯಾಚ್ ರೀತಿ ನೋಡಿ ಬೆಟ್ಟಿಂಗ್ ಆಡಿ ಮನೆ ಮಠ ಕಳೆದುಕೊಳ್ಳ ಬೇಡಿ ಅನ್ನೋ ಒಂದು ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. 2 ವರ್ಷಗಳ ಹಿಂದೆ ಐಪಿಎಲ್ ಆಟದ ರೀತಿ ನೋಡಿ ಬೆಟ್ಟಿಂಗ್ ಆಡಬೇಡಿ ಎಂದು ಹೇಳಿದ್ರು, ಸದ್ಯ ಇವತ್ತಿನಿಂದ ಐಪಿಎಲ್ ಶುರುವಾಗುತ್ತಿದ್ದು, ಇದೀಗ ಡಿ ಬಾಸ್ ಅವರ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ಡಿ ಬಾಸ್ ಅವರ ಈ ಕಳಕಳಿ ವಿಡಿಯೋ ನಿಜಕ್ಕೂ ಮೆಚ್ಚುವಂತಹದ್ದು, ಇಂತಹ ವಿಡಿಯೋಗಳು ಮತ್ತಷ್ಟು ವೈರಲ್ ಕೂಡ ಆಗಬೇಕು.