ದಯವಿಟ್ಟು ಮೋಸ ಹೋಗಬೇಡಿ ಎಂದು ಅಭಿಮಾನಿಗಳಲ್ಲಿ ಮನವಿಮಾಡಿಕೊಂಡ ಡಾಲಿ ಧನಂಜಯ್‌

ಸ್ಯಾಂಡಲ್‌ವುಡ್‌ನ ನಟಭಯಂಕರ ಡಾಲಿ ಧನಂಜಯ್‌ ಇದೀಗ ಸಿನಿರ ಪ್ರಿಯರಲ್ಲಿ ಮತ್ತು ತಮ್ಮ ಅಭಿಮಾನಿಗಳ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪೋಸ್ಟ್‌ಗಳನ್ನು ನೋಡಿ ಮೋಸ ಹೋಗಬೇಡಿ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿರದ ಹೆಸರನ್ನು ಹೇಳಿಕೊಂಡು ಜನರಿಗೆ ಮೋಸ ಮಾಡೋ ಜನರಿದ್ದು, ಈಗಾಗಲೇ ಸ್ಟಾರ್‌ ನಟ ನಟಿಯ ಹೆಸರಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಖಾತೆಗಳನ್ನು ತೆರೆದು ಹಣವನ್ನು ಕೇಳಿರೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಡಾಲಿ ಧನಂಜಯ್‌ ಅವರ ಚಿತ್ರಕ್ಕೆ ಸಹ ಕಲಾವಿದರು ಬೇಕಾಗಿದ್ದಾರೆ ಅನ್ನೋ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದ್ದು, ಈ ಪೋಸ್ಟ್‌ ಅನ್ನು ಡಾಲಿ ಧನಂಜಯ್‌ ಶೇರ್‌ ಮಾಡುವ ಮೂಲಕ ಸ್ವತಃ ಟ್ವೀಟ್‌ ಮಾಡಿ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಈ ತರಹ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗಬೇಡಿ. ಈ ತರಹ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ Be aware, verify everything before trusting anything and anyone on social media ಅಂತ ಬರೆದುಕೊಂಡಿದ್ದಾರೆ.

ಇನ್ನು ತಮ್ಮ ಟ್ವೀಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದು, ಅದರನ್ಲಿ ಆಕಾಶ್‌ ಗೌಡ ಎಂಬ ಹೆಸರಿನ ಪ್ರೋಫೈಲ್‌ನಿಂದ ಡಾಲಿ ಧನಂಜಯ್‌ ಅವರ ಫೋಟೋ ಶೇರ್‌ ಮಾಡಿ , ನಮ್ಮ ಹೊಸ ಕನ್ನಡ ಸಿನಿಮಾಗೆ ಸಹ ಕಲಾವಿದರು ಬೇಕಾಗಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಸರ್‌ ನಟಿಸುತ್ತಿದ್ದಾರೆ, ಯಾರಿಗಾದರೂ ಆಸಕ್ತಿ ಇದ್ದರೆ ನಮಗೆ ಮೆಸೇಜ್‌ ಮಾಡಿ, ಪ್ರೊಫೆಷನಲಿಸ್ಟ್‌ಗಳಿಗೆ ಮಾತ್ರ ಅಂತ ಬರೆದುಕೊಂಡಿದ್ದಾರೆ.

ಇದೀಗ ಈ ಪೋಸ್ಟ್‌ ನೋಡಿದ ಡಾಲಿ ಅಭಿಮಾನಿಗಳಲ್ಲಿ ಮನವಿಮಾಡಿಕೊಂಡಿದ್ದು, ಯಾರು ಈ ರೀತಿಯ ಪೋಸ್ಟ್‌ಗಳಿಗೆ ಮೋಸ ಹೋಗಬೇಡಿ ಅಂತ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top