ದನಕಾಯೋ ಹುಡುಗಿ ಜೊತೆ‌ ಎಂಗೇಜ್ ಆದ ಹಾರ್ಧಿಕ್ ಪಾಂಡ್ಯ..!

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ಧಿಕ್ ಪಾಂಡ್ಯ ನ್ಯೂ ಇಯರ್ ಅನ್ನ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ತನ್ನ ಬಹುದಿನದ ಗೆಳತಿ ಸರ್ಬಿಯಾ ಮೂಲದ ನಟಿ ನತಾಶ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಹಾರ್ಧಿಕ್ ಪಾ‌ಂಡ್ಯ ನತಾಶ ಜೊತೆ ಎಂಗೇಜ್ ಆಗಿರೋ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು.

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ಸದ್ಯ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರೋ‌ ಪಾಂಡ್ಯ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ.ಸದ್ಯ ಇಂಡಿಯಾ ಎ ಟೀಂ ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದು ಆ ತಂಡದಲ್ಲಿ ಹಾರ್ಧಿಕ್ ಆಡಲಿದ್ದಾರೆ. ಇನ್ನು ಸರ್ಬಿಯಾ ಮೂಲದ ನತಾಶಾ ಸ್ಟ್ಯಾಂಕೊವಿಚ್ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು,ಬಿಗ್ ಬಾಸ್ ಸ್ಪರ್ಧಿಕೂಡ ಆಗಿದ್ದರು,ಅಷ್ಟೇ ಅಲ್ಲದೇ ಯೋಗರಾಜ್ ಭಟ್ ನಿರ್ದೇಶನದ ‘ದನಾಕಾಯೋನು’ ಚಿತ್ರದಲ್ಲೂ ನತಾಶಾ ನಟಿಸಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top