ಥಿಯೇಟರ್ ನಲ್ಲಿ ಹೊಸ ವೃತ್ತ ಬರೆಯಲು ರೆಡಿಯಾಯ್ತು ವೃತ್ರ ಚಿತ್ರ..!

ವೃತ್ರ..ಟ್ರೈಲರ್ ಮೂಲಕ‌ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಿದ ಸಿನಿಮಾ, ಇದಕ್ಕೂ ಮೊದಲು ಈ ಸಿನಿಮಾಗೆ ಕಿರಿಕ್ ಬೆಡಗಿ ನಾಯಕಿ ಅನ್ನೋ‌ ಮಾತುಗಳು ಕೇಳಿ ಬಂದಿತ್ತು , ಆ ಸಮಯದಲ್ಲೇ ಚಿತ್ರ ಒಂದು ಲೆವೆಲ್ ಗೆ ಜನರನ್ನ ಕ್ಯೂರ್ಯಾಸಿಟಿಯಲ್ಲಿ ಇಡುವಂತೆ ಮಾಡಿತ್ತು, ಆ ನಂತರದಲ್ಲಿ ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರ ಬಂದ ಮೇಲೆ ಈ‌ ಚಿತ್ರಕ್ಕೆ ಯಾರ್ ಸೂಟ್ ಆಗ್ತಾರೆ ಅನ್ನೋವಾಗ್ಲೇ ಹೊಸ ಹುಡುಗಿ ನಿತ್ಯ ಶ್ರೀಯನ್ನು ಹುಡುಕಿ ಸಿನಿಮಾ ಶುರುಮಾಡಿತ್ತು ಚಿತ್ರತಂಡ, ಕೇವಲ ಸಿಂಗಲ್ ಪೋಸ್ಟರ್ ನಿಂದ ಸೌಂಡ್ ಮಾಡಿದ್ದ ವೃತ್ರ ಚಿತ್ರ, ನಂತರ ಡಿಫರೆಂಟ್ ಸೌಂಡ್ ಎಫೆಕ್ಟ್ , ಸಸ್ಪೆನ್ಸ್ ಕೂಡಿದ್ದ ಟ್ರೈಲರ್ ಮೂಲಕ ಸ್ಯಾಂಡಲ್ವುಡ್ ನಲ್ಲಿ ಸೌಂಡ್ ಮಾಡಿತ್ತು. ಟ್ರೈಲರ್ ಮೂಲಕ‌ ಸೌಂಡ್ ಮಾಡಿದ್ದ ವೃತ್ರ ಚಿತ್ರ ಇದೇ ಅಕ್ಟೋಬರ್ ನಿಂದ ಥಿಯೇಟರ್ ನಲ್ಲಿ ಸೌಂಡ್ ಮಾಡಲು ಬರ್ತಾ ಇದೆ,ಈಗಾಗ್ಲೇ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು. ನಿರ್ಮಾಣದ ದೃಷ್ಟಿಯಲ್ಲಿ ಎಲ್ಲೂ ಹಿಂದೆ ಬಿದ್ದಿಲ್ಲ ಅಂತ ಅನಿಸುತ್ತಿದೆ ಚಿತ್ರ ತಂಡ ಇನ್ನು ಸೀಕ್ವೆನ್ಸ್ ಟು ಸೀಕ್ವೆನ್ಸ್ ಸ್ಪೆಷಲ್ ಆಗಿ ಕಾಣ್ತಿದೆ.

ಚಿತ್ರದಲ್ಲಿ ನಿತ್ಯಶ್ರೀ ಜೊತೆಗೆ ಸುಧಾರಾಣಿ, ಪ್ರಕಾಶ್ ಬೆಳವಾಡಿ ಮತ್ತು ವಿಶೇಷ ಪಾತ್ರದಲ್ಲಿ ನಿರ್ದೇಶಕ ತರುಣ್ ಸುಧೀರ್ ಕಾಣಿಸಿಕೊಂಡಿರೋದು ಚಿತ್ರದ ಮತ್ತೊಂದು ದೊಡ್ಡ ಹೈಲೈಟ್. ಈ ಚಿತ್ರವನ್ನ ಆರ್.ಗೌತಮ್ ಐಯ್ಯರ್ ನಿರ್ದೇಶನ ಮಾಡಿದ್ದು, ಲಲತಾ ಶಂಭುಲಿಂಗಯ್ಯ ಸ್ವಾಮಿ , ರಾಜ್ವಾತ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಡಿ ಎ ವಸಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಕ್ಟೋಬರ್ 11ಕ್ಕೆ ವೃತ್ರ ರಿಲೀಸ್
ವೃತ್ರ ಸಿನಿಮಾ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿ ಕಾಣ್ತಿದೆ. ಜೊತೆಗೆ ಕಂಟೆಂಟ್ ಕೂಡ ತುಂಬಾ ಚೆನ್ನಾಗಿರುವಂತೆ ಭಾಸವಾಗ್ತಿದೆ.. ಎಲ್ಲಾ ಆಂಗಲ್ ನಿಂದ್ಲೂ ಪಾಸಿಟೀವ್ ಆಗಿ ಕಾಣ್ತಿರೋ ಈ ಚಿತ್ರ ಇದೇ ಅಕ್ಟೋಬರ್ 11ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top