ತೆಲುಗು ಚಾನೆಲ್ ವಿರುದ್ಧ ಹೋರಾಟಕ್ಕೆ ಸಿದ್ಧವಾದ KGF ತಂಡ..!

KGF ಸ್ಯಾಂಡಲ್ ವುಡ್ ನ ಮಾಸ್ಟರ್ ಸಿನಿಮಾ, ಇಡೀ ಭಾರತೀಯ ಚಿತ್ರರಂಗ ಮೆಚ್ಚಿಕೊಂಡ ಸಿನಿಮಾ, ಇನ್ನು ತೆಲುಗಿನಲ್ಲೂ KFG ಸಿನಿಮಾವನ್ನು ಮೆಚ್ಚಿಕೊಂಡು ರಾಖಿಭಾಯ್ ಅಭಿಮಾನಿಗಳು ಆಗಿದ್ದಾರೆ, ಹೀಗಿರುವಾಗಲೇ ತೆಲುಗು ಚಾನೆಲ್ ವಿರುದ್ಧ ಹೋರಾಟ ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ. ತೆಲುಗಿನ EVery ಅನ್ನೋ ಲೋಕಲ್ ಚಾನೆಲ್ ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ಪ್ರಸಾರ ಮಾಡಿದ್ದು ಈ ಬಗ್ಗೆ ಚಿತ್ರದ ವಿತರಕ ಟ್ವೀಟ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇ‌ನ್ನು ಕೆಜಿಎಫ್ ಚಿತ್ರದ ಸ್ಯಾಟಲೈಟ್ ಬಗ್ಗೆ ಅಂತಿಮ ಮಾತುಕತೆ ನಡೆಯುತ್ತಿತ್ತು ಈ ವೇಳೆ ಲೋಕಲ್ ಚಾನೆಲ್ ಚಿತ್ರವನ್ನು ಪ್ರಸಾರ ಮಾಡಿದ್ದು ಚಾಲೆನ್ ವಿರುದ್ಧ ಕಾನೂನು ಸಮರ ಮಾಡಲಿದ್ದೇನೆ. ಆ ಚಾನೆಲ್ ಚಿತ್ರವನ್ನು ಪ್ರಸಾರ ಮಾಡಿರೋ ಫೋಟೋ, ವಿಡಿಯೋಗಳು ನಮ್ಮ ಬಳಿ ಇವೆ ಇದರ ಅನ್ವಯ ನಾವು ಕಾನೂನಿನ ಹೋರಾಟ ಮಾಡುವುದಾಗಿ‌ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top