ತಿರುಪತಿ ತಿಮ್ಮಪ್ಪನಿಗೂ ತಟ್ಟಿತು ಆರ್ಥಿಕ ಸಂಕಷ್ಟ..!

ದೇಶ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಎಲ್ಲೆಲ್ಲೂ ಉದ್ಯೋಗ ಕಡಿತದ ಭೀತಿ ಶುರುವಾಗಿದೆ, ಇನ್ನು ಕೆಲವು ಕಡೆ ಕೆಲವು ಸಂಸ್ಥೆಗಳು ಸಹ ತಮ್ಮ ಉತ್ಪಾದನೆಯಲ್ಲಿ ಸಹ ಕಡಿತಗೊಳಿಸುತ್ತಿದೆ, ಇದೇ ವೇಳೆ ಈಗ ಆರ್ಥಿಕ ಸಂಕಷ್ಟ ದೇವಾಲಯಗಳಿಗೆ ತಟ್ಟಿದಂತೆ ಕಾಣುತ್ತಿದೆ, ಅದರಲ್ಲೂ ಮುಕ್ಕೋಟಿ ದೇವರುಗಳಲ್ಲೂ ಶ್ರೀಮಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ ಅಂದರೆ ನೀವೂ ನಂಬಲೇ ಬೇಕು.

ಹೌದು ಒಂಭತ್ತು ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವದಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಭಕ್ತರು ತಿರುಮಲನ ದರ್ಶನಕ್ಕೆ ಬಂದಿದ್ದರು ಸಹ ಹುಂಡಿಯಲ್ಲಿ ಹಣ ಸಂಗ್ರಹಣೆಯಲ್ಲಿ ಮಾತ್ರ ಕಡಿಮೆಯಾಗಿದೆ. ಮಂಗವಾರ ತಿರುಪತಿ ತಿಮ್ಮಪ್ಪನ 89 ದಿನಗಳ ಬ್ರಹ್ಮೋತ್ಸವಕ್ಕೆ ತೆರೆ ಬಿದ್ದಿದೆ, ಇನ್ನು ಕಳೆದ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆಯು ಕೂಡ ಗಣನೀಯವಾಗಿ ಏರಿಕೆ ಕಂಡಿದೆ. 9 ದಿನಗಳ ಕಾಲ ನಡೆಯೋ ಈ ಬ್ರಹ್ಮೋತ್ಸವದಲ್ಲಿ ಈ ಬಾರಿ 7.7 ಲಕ್ಷ ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ, ಆದ್ರೆ ಕಳೆದ ವರ್ಷ ಕೇವಲ 5.9 ಲಕ್ಷ ಭಕ್ತರು ಮಾತ್ರ ವೆಂಕಟೇಶ್ವರನ ದರ್ಶನ ಪಡೆದಿದ್ರು, ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರು ಹುಂಡಿಯ ಗಳಿಕೆಯಲ್ಲಿ ಮಾತ್ರ ಬಹಳ ಕಡಿಮೆಯಾಗಿದೆ.

ಕಳೆದ ಬಾರಿ 9 ದಿನದಲ್ಲಿ 20.52ಕೋಟಿ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿದ್ರೆ, ಈ ಬಾರಿ ಸ್ವಲ್ಪ ಇಳಿಕೆ ಕಂಡಿದ್ದು 20.40ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 12.75 ಲಕ್ಷ ರೂಪಾಯಿ ಕಡಿಮೆಯಾಗಿದೆ.
ಇನ್ನು ಕಳೆದ ವರ್ಷ ತಿಮ್ಮಪನಿಗೆ ಮುಡಿಕೊಟ್ಟವರ ಸಂಖ್ಯೆ 2.17ಲಕ್ಷವಾಗಿದ್ರೆ, ಈ ಬಾರಿ ಅದು 3.23 ಲಕ್ಷಕ್ಕೆ ಏರಿದೆ. ಒಟ್ಟಿನಲ್ಲಿ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ರು ಹುಂಡಿಯಲ್ಲಿ ಹಣದ ಸಂಗ್ರಹ ಮಾತ್ರ ಗಣನೀಯವಾಗಿ ಇಳಿಕೆ ಕಂಡಿದೆ ಎಂದು ದೇವಾಲಯದ ಕಾರ್ಯನಿರ್ವಹಕ ಅಧಿಕಾರಿಗಳು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top